ಅಮರಾವತಿ: ಡಿಜಿಟಲ್ ವರ್ಗಾವಣೆಗಳು ನಗದು ವಹಿವಾಟುಗಳಿಗಿಂತ ದುಬಾರಿ ಎಂದು ಹೆಚ್ಚಿನ ಭಾರತೀಯರು ಪರಿಗಣಿಸಿದ್ದಾರೆ, ಇದರಿಂದ ಪ್ರಧಾನಿ ನರೇಂದ್ರ ಮೋದಿಯವರ ಅತೀದೊಡ್ಡ ಯೋಜನೆಯ ಆಶಯಕ್ಕೆಯೇ ಧಕ್ಕೆಯುಂಟಾಗುತ್ತಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ಡಿಜಿಟಲ್ ವಹಿವಾಟುಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸಿರುವ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ವಿರುದ್ಧ ಅವರು ಕಿಡಿಕಾರಿದ್ದಾರೆ. ಅಲ್ಲದೇ ಇವುಗಳನ್ನು ಅನಧಿಕೃತ ಶುಲ್ಕ ಎಂದು ಅವರು ಬಣ್ಣಿಸಿದ್ದಾರೆ.
ಹಣಕಾಸು ಸಂಸ್ಥೆಗಳು ಅನಧಿಕೃತ ಶುಲ್ಕ ವಿಧಿಸುತ್ತಿರುವ ಕಾರಣಕ್ಕೆಯೇ ಹೆಚ್ಚಿನ ಭಾರತೀಯ ಡಿಜಿಟಲ್ ವಹಿವಾಟು ನಗದು ವಹಿವಾಟಿಗಿಂತ ದುಬಾರಿ ಎಂದು ಪರಿಗಣಿಸಿದ್ದಾರೆ. ಇದು ಪ್ರಧಾನಿ ಹಮ್ಮಿಕೊಂಡಿರುವ ಡಿಜಿಟಲ್ ಅಭಿಯಾನದ ಮೂಲ ಆಶಯವನ್ನೇ ಸೋಲಿಸಿ ಬಿಡಬಹುದು ಎಂಬ ಭಯ ನನಗಿದೆ ಎಂದು ನಾಯ್ಡು ಹೇಳಿದ್ದಾರೆ.
ಈ ವಿಷಯಗಳ ಬಗ್ಗೆ ನಾನು ಕೇಂದ್ರ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದ್ದೇನೆ, ಡಿಜಿಟಲ್ ವರ್ಗಾವಣೆಗಳಿಗೆ ಸಬ್ಸಿಡಿ ನೀಡುವ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ಮನವಿ ಮಾಡಿದ್ದೇನೆ. ಇದರಿಂದ ಹಣಕಾಸು ಸಂಸ್ಥೆಗಳು ನಾಗರಿಕ ಮೇಲೆ ಹೊರೆ ಹಾಕಬಾರದು, ಡಿಜಿಟಲ್ ವರ್ಗಾವಣೆ ಅವರನ್ನು ಆಕರ್ಷಿತಗೊಳಿಸಬೇಕು ಎಂದಿದ್ದಾರೆ.
ಮೋದಿ ಕೇಂದ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಯುಪಿಎ ನಾಶ ಮಾಡಿದ್ದ ಆರ್ಥಿಕತೆಯನ್ನು ಮತ್ತು ಭಾರತದ ಬ್ರಾಂಡ್ ಇಮೇಜ್ನ್ನು ಮರು ನಿರ್ಮಾಣ ಮಾಡುತ್ತಿದ್ದಾರೆ. ಮೋದಿ ಕೊಳಚೆಯನ್ನು ಶುದ್ಧೀಕರಿಸುತ್ತಿದ್ದಾರೆ ಮತ್ತು ಆರ್ಥಿಕತೆಯನ್ನು ಸರಿಯಾದ ದಾರಿಗೆ ತರುತ್ತಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.