ಶಾಂಘೈ: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚೀನಾದ ಪ್ರಮುಖ ಕಂಪನಿಗಳ ಸಿಇಓಗಳನ್ನು ಭೇಟಿಯಾದರು ಮತ್ತು ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಭಾರತ ಮತ್ತು ಚೀನಾ ಕಂಪನಿಗಳು ಸುಮಾರು 22 ಬಿಲಿಯನ್ ಡಾಲರ್ ಮೌಲ್ಯದ 21 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ.
ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ ‘ಈಗ ಭಾರತ ವ್ಯವಹಾರಕ್ಕೆ ಸಿದ್ಧವಾಗಿದೆ, ಬದಲಾವಣೆಯ ಬಿರುಗಾಳಿಯನ್ನು ನೀವು ನೋಡಲಿದ್ದೀರಿ, ನಿಮ್ಮ ಯಶಸ್ಸಿನ ಬಗೆಗೆ ನಾನು ವೈಯಕ್ತಿಕ ಗಮನ ನೀಡುತ್ತೇನೆ’ ಎಂದರು.
‘ನೀವು ಈ ಜಗತ್ತಿನ ಫ್ಯಾಕ್ಟರಿಯಿದ್ದಂತೆ, ನಾವು ವಿಶ್ವದ ಬ್ಯಾಕ್ ಆಫೀಸ್ಯಿದ್ದಂತೆ..ಬನ್ನಿ ಪರಸ್ಪರ ಹಿತಾಸಕ್ತಿಯಿಂದ, ನಮ್ಮ ನಮ್ಮ ದೇಶದ ಪ್ರಗತಿ, ಸಮೃದ್ಧಿಗಾಗಿ ಒಟ್ಟಾಗಿ ಕಾರ್ಯನಿರ್ವಹಿಸೋಣ’ ಎಂದು ಮೋದಿ ಚೀನಾ ಉದ್ಯಮಿಗಳಿಗೆ ಕರೆ ನೀಡಿದರು.
ಮೇಕ್ ಇನ್ ಇಂಡಿಯಾದಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಚೀನಾ ಮತ್ತು ಭಾರತದ 200 ಕಂಪನಿಗಳ ಉದ್ಯಮಿಗಳು ಮೋದಿ ಭಾಷಣವನ್ನು ಆಲಿಸಿದರು.
ಇಂದಿಗೆ ಮೋದಿಯವರ ಮೂರು ದಿನಗಳ ಚೀನಾ ಭೇಟಿ ಅಂತ್ಯವಾಗಲಿದೆ. ಶಾಂಘೈನಿಂದ ಅವರು ಮಂಗೋಲಿಯಾಗೆ ತೆರಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.