ಇ-ಕಾಮರ್ಸ್ ಬಗ್ಗೆ ಯೋಚಿಸುವಾಗಲೆಲ್ಲ ನಮಗೆ ಭಾರತೀಯರ ಖರೀದಿಸುವಿಕೆಯ ವಿಧಾನವನ್ನೇ ಬದಲಾಯಿಸುತ್ತಿರುವ ಫ್ಲಿಪ್ಕಾರ್ಟ್, ಅಮೇಝಾನ್ ಮುಂತಾದವುಗಳು ಕಣ್ಣ ಮುಂದೆ ಬರುತ್ತವೆ. ಆದರೆ ಆನ್ಲೈನ್ ಮಾರುಕಟ್ಟೆಯಲ್ಲಿ ಭಾರತದ ಕಾಟೇಜ್ ಉದ್ಯಮ ಕೂಡ ಸಾಕಷ್ಟು ಉತ್ತೇಜನವನ್ನು ಪಡೆದುಕೊಳ್ಳುತ್ತಿದೆ.
ಸಾಮಾಜಿಕ ಜಾಲತಾಣಗಳಿಂದಾಗಿ ಭಾರತದ ಕಾಟೇಜ್ ಉದ್ಯಮ ಆನ್ಲೈನ್ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣುತ್ತಿದೆ. ಇದಕ್ಕೆ ಉದ್ಯಮಿಗಳಾಗಿ ಪರಿವರ್ತನೆಗೊಂಡಿರುವ ಗೃಹಿಣಿಯರ ತಂಡವೇ ಸಾಕ್ಷಿ.
ಯಾವುದೇ ಹೂಡಿಕೆದಾರರಿಲ್ಲದೆ, ಈ ಗೃಹಿಣಿಯರು ತಾವೇ ತಯಾರಿಸಿದ ಕೃತಕ ಆಭರಣ, ಅಲಂಕಾರಿಕ ವಸ್ತು, ಬಟ್ಟೆ ಮುಂತಾದ ವಸ್ತುಗಳನ್ನು ಸಾಮಾಜಿಕ ಜಾಲತಾಣಗಳ ಸಹಾಯದಿಂದ ಮಾರಾಟ ಮಾಡಿ 54 ಸಾವಿರ ರೂಪಾಯಿ ಲಾಭವನ್ನು ಪಡೆದುಕೊಂಡಿದ್ದಾರೆ.
ವಸ್ತುಗಳು ತಯಾರಾದ ಕೂಡಲೇ ಅದನ್ನು ಫೇಸ್ಬುಕ್, ಇನ್ಸ್ಟಾಗ್ರಾಂಗಳಲ್ಲಿ ಹರಿಬಿಟ್ಟು ಪ್ರಚಾರಪಡಿಸುತ್ತಾರೆ. ಅದರ ಮೂಲಕವೇ ಗ್ರಾಹಕರನ್ನು ಆಕರ್ಷಿಸುತ್ತಾರೆ.
ವಸ್ತುಗಳ ಬಗ್ಗೆ ಇನ್ನಷ್ಟು ಮಾಹಿತಿ ಬೇಕೆಂದಾದರೆ ವಾಟ್ಸಾಪ್ ಮೆಸೇಜ್ ಮಾಡಬಹುದು, ಅಲ್ಲದೇ ಹಣವನ್ನು ಕಳುಹಿಸಿ ಅಥವಾ ಡಿಜಿಟಲ್ ಪೇಮೆಂಟ್ ಮೂಲಕ ಪಾವತಿಸಿ ವಸ್ತುವನ್ನು ಗ್ರಾಹಕರು ತರಿಸಿಕೊಳ್ಳಬಹುದು.
ಬಾಯಿಯಿಂದ ಬಾಯಿಗೆ ಪ್ರಚಾರ ಪಡೆಯುವುದು, ಗ್ರಾಹಕರ ತೃಪ್ತಿ, ಘನತೆಗಳೇ ಇಲ್ಲಿ ಬಂಡವಾಳವಾಗಿದ್ದು, ವ್ಯವಹಾರವನ್ನು ನಿರ್ವಹಿಸಲು ಹೆಚ್ಚಿನ ಖರ್ಚು ಆಗುವುದಿಲ್ಲ. ಎಲ್ಲವೂ ಆನ್ಲೈನ್ ಮೂಲಕ ನಡೆಯುತ್ತದೆ.
ಹೀಗಾಗೀ ಗೃಹಿಣಿಯರಿಗೆ, ವಿದ್ಯಾರ್ಥಿಗಳಿಗೆ ಆದಾಯ ಗಳಿಕೆಯ ಮಾರ್ಗವಾಗಿಯೂ ಆನ್ಲೈನ್ ಮಾರಾಟ ಇಂದು ಹೆಚ್ಚು ಹೆಚ್ಚು ಚಾಲ್ತಿಗೆ ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.