ಅತ್ಯಧಿಕ ಪ್ರಮಾಣದ ಬಿದಿರುಗಳನ್ನು ಉತ್ಪಾದಿಸುವುದಕ್ಕೆ ತ್ರಿಪುರ ಹೆಸರುವಾಸಿಯಾಗಿದೆ. ಬಡವರ ಟಿಂಬರ್ ಎಂದೇ ಖ್ಯಾತವಾಗಿರುವ ಬಿದಿರುಗಳು ತ್ರಿಪುರ ಜನತೆಯ ಸಾಮಾಜಿಕ, ಸಾಂಸ್ಕೃತಿ ಮತ್ತು ಆರ್ಥಿಕ ರಚನೆಯಲ್ಲಿ ಬಹುಮುಖ್ಯ ಮಾತ್ರವನ್ನು ವಹಿಸಿದೆ.
ಇಲ್ಲಿ ಬರೋಬ್ಬರಿ 21 ವಿವಿಧ ತಳಿಯ ಬಿದಿರುಗಳು ಬೆಳೆಯುತ್ತವೆ, ಬಿದಿರು ಸಂಬಂಧಿ ಕಾಯಕವನ್ನೇ ಇಲ್ಲಿನ 2.46 ಲಕ್ಷ ಕುಟುಂಬಗಳು ಸಾಂಪ್ರದಾಯಿಕವಾಗಿ ನೆಚ್ಚಿಕೊಂಡಿದೆ. ಕರಕುಶಲಗಳಿಗೆ ಮಾತ್ರವಲ್ಲದೇ ಅಗರ್ಬತ್ತಿ ಅಥವಾ ಧೂಪದ್ರವ್ಯಗಳಲ್ಲಿ ಬಳಕೆಯಾಗುವ ಬಿದಿರು ಕಡ್ಡಿಗಳನ್ನು ಇಲ್ಲಿ ಹೆಚ್ಚಾಗಿ ತಯಾರು ಮಾಡಲಾಗುತ್ತಿದೆ.
ತ್ರಿಪುರಾವನ್ನು ಬಿದಿರು ಉತ್ಪನ್ನಗಳ ಸಣ್ಣ, ಮಧ್ಯಮ ಕೈಗಾರಿಕೆಗಳ ಹಬ್ನ್ನಾಗಿ ಪರಿವರ್ತಿಸುವ, ಬಿದಿರು ಆಧಾರಿತ ಆರ್ಥಿಕತೆಯನ್ನು ಇಲ್ಲಿ ಸೃಷ್ಟಿಸುವ ಗುರಿಯನ್ನು ಇಟ್ಟುಕೊಂಡು ಸ್ಕಿಲ್ ಇಂಡಿಯಾ ಮಿಶನ್ ಅಡಿ ಇಲ್ಲಿ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ತ್ರಿಪುರ ಬ್ಯಾಂಬೊ ಮಿಶನ್ ಹಮ್ಮಿಕೊಳ್ಳುತ್ತಿದೆ.
ಸೆಪಹಿಜಲ ಜಿಲ್ಲೆಯ ಖಶ್ಚೌಮನಿ ಗ್ರಾಮದಲ್ಲೂ ಇಂತಹ ತರಬೇತಿ ಕಾರ್ಯಕ್ರಮವೊಂದು ನಡೆಯುತ್ತಿದ್ದು, ಇಲ್ಲಿನ ಹಲವಾರು ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ಬಿದಿರಿನಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ತರಬೇತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಸುತ್ತಮುತ್ತಲು ಬಿದಿರುಗಳ ರಾಶಿಯೇ ಇದ್ದರು ಅದನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂಬ ಸ್ಪಷ್ಟ ಜ್ಞಾನ ಹೆಚ್ಚಿನವರಿಗೆ ಇರುವುದಿಲ್ಲ. ಹೀಗಾಗಿ ತ್ರಿಪುರ ಬ್ಯಾಂಬೊ ಮಿಶನ್ ರಾಜ್ಯಾದ್ಯಂತ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಬಿದಿರಿನಿಂದ ವಿವಿಧ ಉತ್ಪನ್ನಗಳನ್ನು, ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಕಲೆಯನ್ನು ಹೇಳಿಕೊಡುತ್ತಿದೆ. ಹೀಗಾಗೀ ಹೆಚ್ಚಿನ ಕುಟುಂಬಗಳು ಬಿದಿರಿನಿಂದ ಸ್ವಾವಲಂಬನೆಯ ಬದುಕನ್ನು ಬದುಕುತ್ತಿದ್ದಾರೆ. ಇತರ ಕಡೆ ಉದ್ಯೋಗಕ್ಕಾಗಿ ವಲಸೆ ಹೋಗುವುದೂ ತಪ್ಪಿದೆ.
ಭಾರತದ ಸ್ಕಿಲ್ ಇಂಡಿಯಾ ಕನಸಿನ ಸಾಕಾರಕ್ಕೆ ಇದೊಂದು ಮಹತ್ವದ ಹೆಜ್ಜೆಯಾಗಿದೆ. ತ್ರ್ರಿಪುರ ಸರ್ಕಾರ ಮತ್ತು ಕರಕುಶಲ ವಲಯಗಳು ಸೇರಿ ಈ ಕಾರ್ಯಕ್ರಮಗಳಿಗೆ 441.25 ಲಕ್ಷ ಆರ್ಥಿಕ ನೆರವನ್ನೂ ನೀಡಿವೆ.
ತಂತ್ರಜ್ಞಾನವನ್ನು ಬಳಸಿ ಕರಕುಶಲ ವಸ್ತುಗಳ ತಯಾರಿಕೆಯಲ್ಲೂ ಇಲ್ಲಿ ಜನ ಯಶಸ್ವಿಯಾಗಿದ್ದಾರೆ. ಇಲ್ಲಿನ ಹೆಚ್ಚಿನ ಮಹಿಳೆಯರು ಸ್ವ ಉದ್ಯೋಗಿಗಳಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.