ತರಕಾರಿಗಳು, ಹಣ್ಣ ಹಂಪಲುಗಳು ಇಂದು ತನ್ನ ನೈಜತೆಯನ್ನು ಕಳೆದುಕೊಳ್ಳುತ್ತಿದೆ. ಆರೋಗ್ಯದಾಯಕಗಳಾಗಿರುವ ಇವುಗಳಿಗೆ ರಾಸಾಯನಿಕಗಳನ್ನು ಹಾಕಿ ಆರೋಗ್ಯಕ್ಕೆ ಹಾನಿಕಾರಕಗಳನ್ನಾಗಿಸಲಾಗುತ್ತಿದೆ. ಅದಕ್ಕಾಗಿಯೇ ನಮಗೆ ಬೇಕಾದ ತರಕಾರಿಗಳನ್ನು ನಾವೇ ಬೆಳೆಸಿದರೆ ಉತ್ತಮ. ಆದರೆ ನಗರಗಳಲ್ಲಿ ವಾಸಿಸುವವರಿಗೆ ಇದು ಕಷ್ಟ.
ಆದರೂ ಇದ್ದ ತುಸು ಜಾಗದಲ್ಲೂ ತರಕಾರಿಗಳನ್ನು ಬೆಳೆಯುವ ಎಲ್ಲಾ ಸಾಧ್ಯತೆಯೂ ಇದೆ. ಅದಕ್ಕೆ ತುಸು ಮನಸ್ಸು ಮಾಡಬೇಕಷ್ಟೇ. ನಗರವಾಸಿಗಳಿಗೆ ತರಕಾರಿ ಬೆಳೆಯುವ ಬಗ್ಗೆ ಜ್ಞಾನ ನೀಡಲೆಂದೇ ಒಂದು ಆ್ಯಪ್ನ್ನು ಅಭಿವೃದ್ಧಿಪಡಿಸಲಾಗಿದೆ. ಅದುವೇ ಗ್ರೋ2ಶೇರ್ ಆ್ಯಪ್.
ಬೆಂಗಳೂರಿನಲ್ಲಿ ನೆಲೆಸಿರುವ ಮಾಯಾಂಕ್ ಅಗರ್ವಾಲ್, ಅಪೂರ್ವ ಜೈಸ್ವಾಲ್, ಫ್ರೆಡರಿಕ್ ಫೋಕುಲ್ ಅವರು ಜಂಟಿಯಾಗಿ ಗ್ರೋ2ಶೇರ್ನ್ನು ಸ್ಥಾಪಿಸಿದ್ದು, ಇದರಲ್ಲಿ ಇಂಟರ್ಯಾಕ್ಟಿವ್ ಟೂಲ್ಸ್ ಮತ್ತು ರಿಸೋರ್ಸ್ಸ್ಗಳಿವೆ. ಸರ್ವಿಸ್ ಪ್ರೊವೈಡರ್ಗಳೊಂದಿಗೆ ಹವ್ಯಾಸಿ ಗಾರ್ಡನರ್ಸ್ಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಈ ಆ್ಯಪ್ನ್ನು ರಚಿಸಲಾಗಿದೆ.
ಆರೋಗ್ಯದಾಯಕ, ರಾಸಾಯನಿಕ ಮುಕ್ತ ತರಕಾರಿಗಳನ್ನು ಜನರು ತಾವಾಗಿಯೇ ಬೆಳೆಸಬೇಕು ಮತ್ತು ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂಬುದೇ ನಮ್ಮ ಆಶಯ. ನಗರದಲ್ಲಿ ಗ್ರೀನ್ ಸ್ಪೇಸ್ನ್ನು ನಿರ್ಮಿಸಬೇಕು ಎಂಬ ದೂರದೃಷ್ಟಿಯೂ ನಮಗಿದೆ ಎಂದು ಇವರುಗಳು ಹೇಳುತ್ತಾರೆ.
ಬೆಳೆಗಳನ್ನು ಹೇಗೆ ಬೆಳೆಯಬೇಕು, ಯಾವಾಗ ಮತ್ತು ಹೇಗೆ ಗೊಬ್ಬರ ಹಾಕಬೇಕು ಎಂಬಿತ್ಯಾದಿ ತರಕಾರಿ ಬೆಳೆಯುವ ಹಂತ ಹಂತಗಳ ಮಾಹಿತಿಗಳನ್ನು ಈ ಆ್ಯಪ್ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.