ದೇಶಕ್ಕಾಗಿ ಜೀವನ ಮುಡುಪಾಗಿಟ್ಟ ಯೋಧರಿಗೆ ಗೌರವವನ್ನು ಸಲ್ಲಿಸಬೇಕೆಂಬ ಮಹದಾಸೆಯನ್ನು ಹೊಂದಿರುವ ಸಹೋದರಿಯರಿಬ್ಬರು ಲಕ್ನೋದಿಂದ ಲೇಹ್-ಲಡಾಖ್ಗೆ 15 ದಿನಗಳ ಬೈಕ್ ಪ್ರಯಾಣವನ್ನು ಆರಂಭಿಸಿದ್ದಾರೆ.
27 ವರ್ಷದ ವಸುಧಾ ಅಗರ್ವಾಲ್ ಮತ್ತು 33 ವರ್ಷದ ಕರುಣಾ ಕಳೆದ ಗುರುವಾರದಿಂದ ಲಕ್ನೋದಿಂದ ಲಡಾಖ್ಗೆ ಬೈಕ್ ಪ್ರಯಾಣವನ್ನು ಆರಂಭಿಸಿದ್ದಾರೆ. ಅವಧ್ ಸ್ಪಿರಿಟ್ ರೈಡರ್ಸ್ ಗ್ರೂಪ್ ಈ ಸಹೊದರಿಯರಿಗೆ ಬೆಂಬಲ ನೀಡಿದೆ.
ವಸುಧಾ ಶಿಕ್ಷಕಿಯಾಗಿದ್ದಾರೆ, ಕರುಣಾ ಅವರು ಮದುವೆ ವಿನ್ಯಾಸ ವ್ಯವಹಾರವನ್ನು ನಡೆಸುತ್ತಿದ್ದಾರೆ. ಆರ್ಥಿಕವಾಗಿ ಅಷ್ಟೊಂದು ಸಬಲರಲ್ಲದಿದ್ದರೂ ಭಾರತೀಯ ಸೇನೆಯ ಮೇಲಿನ ಅಪಾರ ಗೌರವದಿಂದಾಗಿ ಬೈಕ್ ಪ್ರಯಾಣವನ್ನು ಆರಂಭಿಸಿದ್ದಾರೆ.
ಭಾರತೀಯ ಸೇನೆಗೆ ಬೆಂಬಲವಾಗಿ ಬೈಕ್ ರೈಡ್ ಮಾಡುತ್ತಿದ್ದೇವೆ. ದೇಶಕ್ಕಾಗಿ ಅಮೋಘ ಸೇವೆ ನೀಡುತ್ತಿರುವ ಸೇನೆಯನ್ನು ನಾವೆಲ್ಲ ಶ್ಲಾಘಿಸಬೇಕು. ನಮ್ಮ ಪ್ರಯಾಣ ಅಷ್ಟು ಸುಗಮವಲ್ಲ ಎಂಬುದು ನಮಗೆ ತಿಳಿದಿದೆ. ಆದರೂ ನಾವು ತೆರಳಲು ಕಟಿ ಬದ್ಧರಾಗಿದ್ದೇವೆ. ವಿಶ್ವದ ಅತೀಹೆಚ್ಚು ಮೋಟಾರು ರಸ್ತೆ ಎಮದು ಕರೆಯಲ್ಪಡುವ ಕರ್ದುಂಗ್ ಲಾ ಮೂಲಕ ಪ್ರಯಾಣಿಸುತ್ತಿದ್ದೇವೆ ಎಂದು ಸಹೋದರಿಯರು ವಸುಧಾ ಹೇಳುತ್ತಾರೆ.
ಭಾರತೀಯ ಸೇನೆಯಿಂದ ನಾನು ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ. ಅಷ್ಟು ದೊಡ್ಡ ಪರ್ವತದಲ್ಲೂ ಅವರು ಎಚ್ಚರಿಕೆಯಿಂದಿರುತ್ತಾರೆ. ಅವರಿಗೆ ಎಲ್ಲರೂ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಗೌರವ ಸಲ್ಲಿಸಬೇಕು ಎಂದು ಕರುಣಾ ಹೇಳುತ್ತಾರೆ.
ಮಹಿಳೆಯರಾಗಿ ಲಡಾಖ್ಗೆ ಬೈಕ್ ಪ್ರಯಾಣ ಮಾಡಲು ನಮಗೆ ಭಯವಿಲ್ಲ, ಯಾಕೆಂದರೆ ಅಲ್ಲಿ ಭಾರತೀಯ ಸೇನೆ ಇದ್ದೇ ಇರುತ್ತದೆ ಎನ್ನುತ್ತಾರೆ ಈ ಸಹೋದರಿಯರು.
ಇವರ ಸಾಹಸ, ದೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಎಲ್ಲರೂ ಭೇಷ್ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.