ಮಂಗಳೂರು : ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಯೋಜನೆಯಂತೆ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಯನ್ನು ವಿಶ್ವಕರ್ಮ ಸಹಕಾರ ಬ್ಯಾಂಕ್ನ ಎಲ್ಲಾ ಗ್ರಾಹಕರಿಗೆ ಉಚಿತವಾಗಿ ನೀಡಿ ಜಾರಿಗೊಳಿಸಲಾಗುವುದೆಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ ಇವರು ತಿಳಿಸಿದ್ದಾರೆ.
ಸಾಮಾಜಿಕ ಭದ್ರತೆಯ ಕಾಳಜಿಯಿಂದ ಜಾರಿಗೊಳಿಸಿರುವ ಕೇಂದ್ರ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ 18 ವರ್ಷಕ್ಕಿಂತ ಮೇಲ್ಪಟ್ಟು 70 ವರ್ಷದ ಒಳಗಿನ ಬ್ಯಾಂಕಿನ ಎಲ್ಲಾ ಅರ್ಹ ಸದಸ್ಯರು, ರೂ.1,೦೦೦/- ಕ್ಕಿಂತ ಹೆಚ್ಚು ಉಳಿತಾಯವಿರುವ ಉಳಿತಾಯ ಮತ್ತು ಚಾಲ್ತಿ ಖಾತೆದಾರರು, ರೂ.10,೦೦೦/- ಕ್ಕಿಂತ ಹೆಚ್ಚು ಠೇವಣಿದಾರರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದ್ದು, ನೋಂದಣೀಗಾಗಿ ಬ್ಯಾಂಕಿನ ಶಾಖೆಗಳನ್ನು ಸಂಪರ್ಕಿಸ ಬಹುದಾಗಿದೆ. ಈ ಯೋಜನೆಯ ಪ್ರಾರಂಭಿಕ ವಾರ್ಷಿಕ ಪ್ರೀಮಿಯಂನ್ನು ಬ್ಯಾಂಕ್ ಸ್ವತಹ ಭರಿಸಲಿದೆ. ಹಾಗೆಯೇ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯ ಬಗ್ಗೆ ಆಸಕ್ತ ಗ್ರಾಹಕರು ಮತ್ತು ಸದಸ್ಯರು ರೂ.33೦/- ನ್ನು ಬ್ಯಾಂಕಿನ ಯಾವುದೇ ಕಛೇರಿಯಲ್ಲಿ ಪಾವತಿಸಿ ಈ ಯೋಜನೆಯ ಸೌಲಭ್ಯವನ್ನು ಪಡೆದು ಕೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇವಲ ರೂ.12/- ವಾರ್ಷಿಕ ಪ್ರೀಮಿಯಂ ಪಾವತಿಸಿದ ಫಲಾನುಭವಿಗಳು ಅಪಘಾತದ ಸಂದರ್ಭದ ಅವರ ವಾರೀಸುದಾರರಿಗೆ ರೂ. 2 ಲಕ್ಷದವರೆಗೆ ಅಪಘಾತ ವಿಮೆ ದೊರೆಯುತ್ತದೆ. ಅದೇ ರೀತಿ ರೂ.33೦/- ವಾರ್ಷಿಕ ಪ್ರೀಮಿಯಂನ್ನು ಪಾವತಿಸಿದರೆ ಪ್ರಧಾನ ಮಂತ್ರಿ ಜೀವನ ವಿಮಾ ಯೋಜನೆಯಡಿ ರೂ.2 ಲಕ್ಷ ಜೀವ ವಿಮೆ ದೊರೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.