ರಾಯ್ಪುರ: ಛತ್ತೀಸ್ಗಢದ ದುರ್ಗ್ ಪ್ರದೇಶದ 41 ಎಕರೆ ಅರಣ್ಯ ಪ್ರದೇಶಕ್ಕೆ ನಿಧನರಾದ ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರ ಹೆಸರನ್ನಿಡುವುದಾಗಿ ಅಲ್ಲಿ ಸಿಎಂ ರಮಣ್ ಸಿಂಗ್ ತಿಳಿಸಿದ್ದಾರೆ.
ಶುಕ್ರವಾರ ದುರ್ಗ್ನ ಪಟಾನ್ ಡೆವಲಪ್ಮೆಂಟ್ ಬ್ಲಾಕ್ನ ಸಂಕರ ವಿಲೇಜ್ನಲ್ಲಿ ಸೌರಶಕ್ತಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ರಮಣ್ ಸಿಂಗ್ ಈ ಘೋಷಣೆ ಮಾಡಿದ್ದಾರೆ.
‘ನನಗಾಗಿ ಸ್ಮಾರಕ ನಿರ್ಮಿಸಬಾರದು, ನನ್ನ ನೆನಪಿಗಾಗಿ ಗಿಡಗಳನ್ನು ನೆಡಬೇಕು ಎಂಬುದು ದವೆ ಅವರ ಅಂತಿಮ ಇಚ್ಛೆಯಾಗಿತ್ತು. ಅದರಂತೆ ಅರಣ್ಯಕ್ಕೆ ಅವರ ಹೆಸರನ್ನಿಡುತ್ತೇವೆ’ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಈ ಗ್ರಾಮಕ್ಕೆ ಸೋಲಾರ್ ವಾಟರ್ ಪಂಪ್ಗಳನ್ನು ನೀಡಿ ನೀರಾವರಿಯನ್ನು ಉತ್ತೇಜಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.