ನವದೆಹಲಿ: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಯಾದವ್ ಅವರ ಪ್ರಕರಣದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತಕ್ಕೆ ಗೆಲುವಾಗಿದೆ. ಈ ಸಂತೋಷವನ್ನು ಹಲವಾರು ಮಂದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದೇ ರೀತಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರೂ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿದ ತೀರ್ಪಿನ ಪರ ಟ್ವಿಟ್ ಮಾಡಿದ್ದರು. ಆದರೆ ಇದು ಅವರ ಪಾಕಿಸ್ಥಾನಿ ಫಾಲೋವರ್ಗೆ ಇಷ್ಟವಾಗಿಲ್ಲ. ಆದರೆ ಆತನಿಗೆ ಕೈಫ್ ನೀಡಿದ ಉತ್ತರ ನಿಜಕ್ಕೂ ಸಮಸ್ತ ಭಾರತೀಯರು ಅವರ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತದೆ.
ಭಾರತದ ಗೆಲುವಿನ ಬಳಿ ‘ಅಭಿನಂದನೆಗಳು ಭಾರತ, ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಧನ್ಯವಾದ. ನ್ಯಾಯಕ್ಕೆ ಗೆಲುವಾಗಿದೆ’ ಎಂದು ಕೈಫ್ ಟ್ವಿಟ್ ಮಾಡಿದ್ದರು.
ಇದಕ್ಕೆ ಕೆಂಡಾಮಂಡಲನಾದ ಅಮೀರ್ ಎಂಬ ಪಾಕಿಸ್ಥಾನಿ ’ನಿಮ್ಮ ಹೆಸರಿನಿಂದ ಮೊಹಮ್ಮದ್ ಎಂಬುದನ್ನು ಮೊದಲು ತೆಗೆದು ಹಾಕಿ ’ ಎಂದಿದ್ದಾನೆ.
ಇದಕ್ಕೆ ಗೌರವಯುತವಾಗಿಯೇ ಉತ್ತರ ನೀಡಿರುವ ಕೈಫ್, ’ಭಾರತಕ್ಕೆ ಬೆಂಬಲ ನೀಡುತ್ತಿದ್ದೇನೆ ಎಂದು ಮೊಹಮ್ಮದ್ ಹೆಸರನ್ನು ತೆಗೆದು ಹಾಕಬೇಕೆ? ನನಗೆ ನನ್ನ ಹೆಸರಿನ ಬಗ್ಗೆ ಹೆಮ್ಮೆ ಇದೆ. ಅಂದ ಹಾಗೆ ಅಮೀರ್ ಎಂದರೆ ’ಜೀವನ ಪೂರ್ತಿ’ ಎಂಬರ್ಥ. ನನಗನಿಸುತ್ತದೆ ನೀವು ನಿಮ್ಮ ಹೆಸರನ್ನು ತೆಗೆದು ಹಾಕಬೇಕೆಂದು’ ಎಂದಿದ್ದಾರೆ.
ಅವರ ಈ ಟ್ವಿಟ್ಗೆ ಹಲವಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.