ನವದೆಹಲಿ: ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳ ಸಹಾಯಕ್ಕೆಂದು ದೆಹಲಿ ವಿಶ್ವವಿದ್ಯಾಲಯದ ಮಿರಾಂಡ ಹೌಸ್ ಕಾಲೇಜು ‘ಡಿಜಟಲ್ ಟಾಕಿಂಗ್ ಸೈನೇಜ್ಸ್’ನ್ನು ಅಳವಡಿಸಿಕೊಂಡಿದೆ. ಈ ಮೂಲಕ ಈ ವ್ಯವಸ್ಥೆಯನ್ನು ಅಳವಡಿಸಿದ ದೇಶದ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೃಷ್ಟಿ ದೋಷವುಳ್ಳ ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಲ್ಲಿ ತಮಗೆ ಬೇಕಾಗಿರುವ ಜಾಗಗಳಿಗೆ ತೆರಳಲು ಮಾರ್ಗವನ್ನು ಸೂಚಿಸುವ ಮೂಲಕ ಡಿಜಿಟಲ್ ಸೈನೇಜ್ಗಳು ಸಹಾಯ ಮಾಡಲಿದೆ.
ಈ ವ್ಯವಸ್ಥೆ ಇಂತಹ ವಿದ್ಯಾರ್ಥಿಗಳ ಓಡಾಟವನ್ನು ಸುಲಲಿತಗೊಳಿಸುವುದು ಮಾತ್ರವಲ್ಲದೇ ಅವರು ತಂತ್ರಜ್ಞಾನಕ್ಕೆ ಹೆಚ್ಚು ಹೊಂದಿಕೊಳ್ಳುವಂತೆಯೂ ಮಾಡಲಿದೆ.
ಗೋಡೆಗಳಿಗೆ ಒಂದು ಇಂಚು ಅಂತರವಿರುವಂತೆ 6 ಇಂಚುಗಳ ಸರ್ ಸ್ಕ್ಯಾನ್ ಕೋಡ್ಗಳನ್ನು ಕಾಲೇಜು ಆಡಳಿತ ಅಳವಡಿಸಿದೆ. ಮೊದಲು ಅಂಧ ವಿದ್ಯಾರ್ಥಿಗಳು ತಮ್ಮ ಸ್ಮಾರ್ಟ್ಫೋನ್ನಲ್ಲಿ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಆಗ ಅವರು ಈ ಕೋಡ್ಗಳ ಸಮೀಪ ಬಂದಾಗ ಅಟೋಮ್ಯಾಟಿಕ್ ಆಗಿ ಜಾಗಗಳ ಬಗೆಗಿನ ಮಾಹಿತಿ ಇರುವ ಮೌಖಿಕ ಸಂದೇಶವೊಂದು ಬರುತ್ತದೆ.
ಅಷ್ಟೇ ಅಲ್ಲದೇ ಈಗಿರುವ ಸ್ಥಳದಿಂದ ತಾವಿರುವಲ್ಲಿಗೆ ಹೋಗಲು ಎಷ್ಟು ಹೆಜ್ಜೆಗಳನ್ನು ಹಾಕಬೇಕು ಎಂಬುದನ್ನೂ ಇದು ತಿಳಿಸುತ್ತದೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಂಧ ವಿದ್ಯಾರ್ಥಿಗಳಿಗೆ ಮೊಬೈಲ್ನಲ್ಲಿ ಈ ಆಪ್ನ್ನು ಡೌನ್ಲೋಡ್ ಮಾಡಿಕೊಡಲು ಸಹಾಯ ಮಾಡುತ್ತಿದ್ದಾರೆ.
ಇದರಿಂದಾಗಿ ಅಂಧ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್ನಲ್ಲಿ ಸುಲಭವಾಗಿ ಓಡಾಡಲು ಸಹಾಯವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.