ನವದೆಹಲಿ: ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದ ಮೂವರು ಮಹಿಳಾ ಬಾಕ್ಸರ್ಗಳಾದ ಸವೀತಿ ಬೂರ(81ಕೆಜಿ), ಸೋನಿಯಾ ಲಾಥರ್(57ಕೆಜಿ) ಮತ್ತು ಸರ್ಜುಬಲ್ ದೇವಿ(51ಕೆಜಿ) ಅವರನ್ನು ಭಾರತೀಯ ಬಾಕ್ಸಿಂಗ್ ಫೆಡರೇಶನ್ ಈ ವರ್ಷದ ’ಅರ್ಜುನ ಪ್ರಶಸ್ತಿ’ಗೆ ಶಿಫಾರಸ್ಸು ಮಾಡಿದೆ.
ಈ ಮೂವರೂ ನಿರಂತರವಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಾ ಬರುತ್ತಿದ್ದಾರೆ, ಮಾತ್ರವಲ್ಲದೇ ರಾಷ್ಟ್ರೀಯ ತಂಡದಲ್ಲಿ ಸಕ್ರಿಯರಾಗಿದ್ದಾರೆ ಎಂದು ಫೆಡರೇಶನ್ ಹೇಳಿದೆ.
2014ರಲ್ಲಿ ಸವೀತಿ ಮತ್ತು ಸರ್ಜುಬಲ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. 2016ರಲ್ಲಿ ಸೋನಿಯಾ ಭಾರತಕ್ಕೆ ಬೆಳ್ಳಿ ತಂದುಕೊಟ್ಟಿದ್ದರು.
ಬಾಕ್ಸಿಂಗ್ ಫೆಡರೇಶನ್ ಈ ಬಾರಿ ಮಹಿಳೆಯರನ್ನು ಮಾತ್ರ ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿರುವುದು ವಿಶೇಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.