ಮಹಾನ್ ಸಂಗೀತಗಾರ ತ್ಯಾಗರಾಜ ಅವರು 1767 ಮೇ4ರಂದು ಕಾಕರ್ಲ ತ್ಯಾಗಬ್ರಾಹ್ಮಮ್ ಆಗಿ ತಮಿಳುನಾಡಿನ ತಂಜಾಪೂರಿನಲ್ಲಿ ಜನಿಸಿದರು. ಇವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು 1961ರ ಜನವರಿ 6ರಂದು ಪೋಸ್ಟಲ್ ಸ್ಟ್ಯಾಂಪ್ನ್ನು ಬಿಡುಗಡೆಗೊಳಿಸಿತ್ತು.
ತಂದೆ ತಾಯಿಯರಿಂದ ಭಕ್ತಿ ಗೀತೆಗಳನ್ನು ಹಾಡಲು ಪ್ರೇರಣೆ ಪಡೆದ ಇವರು ಬಳಿಕ ಸೋಂತಿ ವೆಂಕಟರಾಮನಯ್ಯ ಅವರ ಬಳಿ ಸಂಗೀತ ತರಬೇತಿಯನ್ನು ಪಡೆದರು. ಬಾಲ್ಯದಲ್ಲಿ ಕೇವಲ ಭಕ್ತಿಗೀತೆಗಳನ್ನು ಹಾಡುವುದಕ್ಕೆ ಮಾತ್ರ ಸೀಮಿತವಾಗಿದ್ದ ಇವರು ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ಸಂಗೀತ ಸಂಯೋಜನೆಗಳನ್ನು ಮಾಡತೊಡಗಿದರು. ಇವರು ಮೊದಲು ಸಂಯೋಜನೆ ಮಾಡಿದ ಹಾಡು ’ನಮೋ ನಮೋ ರಾಘವಯ್ಯ’.
ರಾಜುಗಳ ಅರಮನೆ ಸಂಗೀತಗಾರನಾಗುವ ಅವಕಾಶವನ್ನು ತಿರಸ್ಕರಿಸಿದ ಇವರು, ಜನಪ್ರಿಯ ಕೀರ್ತನೆ ‘ನಿಧ ಚಲ ಸುಖಮ’ವನ್ನು ರಚಿಸಿದರು. ಇವರ ವರ್ತನೆಯಿಂದ ಕೋಪಗೊಂಡ ಇವರ ಅಣ್ಣ ಇವರು ಆರಾಧನೆ ಮಾಡುತ್ತಿದ್ದ ರಾಮನ ಮೂರ್ತಿಯನ್ನು ಕಾವೇರಿ ನದಿಗೆ ಎಸೆದಿದ್ದರು. ಇದರಿಂದ ನೊಂದ ತ್ಯಾಗರಾಜರು ಮನೆಬಿಟ್ಟರು ಮಾತ್ರವಲ್ಲದೇ ರಾಮನಿಗಾಗಿಯೇ ಹಲವಾರು ಹಾಡುಗಳನ್ನು ರಚಿಸಿದರು.
ಮೂಲಗಳ ಪ್ರಕಾರ ಇವರು 24 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅದರಲ್ಲೀಗ 700 ಭಕ್ತಿ ಗೀತೆಗಳು ಮಾತ್ರ ಅಸ್ತಿತ್ವದಲ್ಲಿದೆ.
Courtesy : Stamp Today Group (Sri Jaganath Mani)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.