ನವದೆಹಲಿ: ಜನರಿಗೆ ತಮ್ಮ ಸಮೀಪದಲ್ಲಿರುವ ಮೊಬೈಲ್ ಟವರ್ ಎಷ್ಟು ಪ್ರಮಾಣದ ರೇಡಿಯೇಶನನ್ನು ಹೊರ ಹಾಕುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸಹಾಯಕವಾಗುವಂತಹ ವೆಬ್ ಪೋರ್ಟಲ್ವೊಂದನ್ನು ಮಂಗಳವಾರ ಬಿಡುಗಡೆಗೊಳಿಸಲಾಗಿದೆ.
ಈ ವೆಬ್ ಪೋರ್ಟಲ್ ಹೆಸರು ತರಂಗ್ ಸಂಚಾರ್ ಆಗಿದ್ದು, ಟೆಲಿಕಾಂ ಇಲಾಖೆ ಇದನ್ನು ಹೊರತಂದಿದೆ. ಕೇಂದ್ರ ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಅವರು ಮಂಗಳವಾರ ಈ ಪೋರ್ಟಲ್ನ್ನು ಲೋಕಾರ್ಪಣೆ ಮಾಡಿದರು.
ಮೊಬೈಲ್ ಟವರ್ಗೆ ಸಂಬಂಧಪಟ್ಟ ಸುಳ್ಳುಗಳನ್ನು, ತಪ್ಪು ತಿಳುವಳಿಕೆಗಳ ಬಗ್ಗೆಯೂ ಈ ವೆಬ್ನಲ್ಲಿ ಮಾಹಿತಿ ಇರಲಿದೆ. ಅಲ್ಲದೇ ನಿಯಮಗಳಿಗೆ ಅನುಸಾರವಾಗಿಯೇ ನಮ್ಮ ಸಮೀಪದ ಟವರ್ನ್ನು ಸ್ಥಾಪಿಸಲಾಗಿದೆಯೇ ಎಂಬುದನ್ನೂ ಈ ವೆಬ್ ಮೂಲಕ ನಾವು ತಿಳಿದುಕೊಳ್ಳಬಹುದಾಗಿದೆ.
ಕೇವಲ ಮೌಸ್ನ್ನು ಕ್ಲಿಕ್ ಮಾಡುವುದರಿಂದ ಗ್ರಾಹಕರು ತಮ್ಮ ಸಮೀಪದಲ್ಲಿನ ಟವರ್ಗಳು ಹೊರ ಸೂಸುವ ರೇಡಿಯೇಶನ್ಗಳನ್ನು ತಿಳಿಯಬಹುದು, ಮಾತ್ರವಲ್ಲ ಟವರ್ಗಳ ಸಂಪೂರ್ಣ ಜ್ಞಾನವನ್ನು ಈ ವೆಬ್ ಮೂಲಕ ಪಡೆದುಕೊಳ್ಳಬಹುದು ಎಂದು ಸಿನ್ಹಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.