ಚಂಡೀಗಢ: ಎರಡನೇ ಪೀಳಿಗೆಯ ಎಥೆನಾಲ್ನ್ನು ಉತ್ಪಾದಿಸುವ ಸಲುವಾಗಿ ಹರಿಯಾಣದಲ್ಲಿ ಸುಮಾರು 600 ಕೋಟಿ ವೆಚ್ಚದಲ್ಲಿ ಪ್ಲಾಂಟ್ ನಿರ್ಮಿಸಲು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮುಂದಾಗಿದೆ.
ಸಸ್ಯ ತ್ಯಾಜ್ಯ, ಪೈರಿನ ಕೊಳೆ, ತೊಗಟೆ, ಒಣಹುಲ್ಲು ಮುಂತಾದುವುಗಳನ್ನು ಬಳಸಿ ಈ ಪ್ಲಾಂಟ್ ಪ್ರತಿನಿತ್ಯ100 ಕಿಲೋ ಮೀಟರ್ ಎಥೆನಾಲ್ನ್ನು ಉತ್ಪಾದನೆ ಮಾಡಲಿದೆ. ಹರಿಯಾಣ ಸರ್ಕಾರ ಇದಕ್ಕಾಗಿ ಉಚಿತವಾಗಿ ಅಥವಾ ಲೀಸ್ಗೆ ಭೂಮಿ ನೀಡಲು ಸಮ್ಮತಿ ಸೂಚಿಸಿದೆ.
ಇಂತಹ ಪ್ಲಾಂಟ್ ದೇಶದಲ್ಲೇ ಅತೀ ದೊಡ್ಡದು ಎಂದು ಹೇಳಲಾಗಿದ್ದು, ನೂರಾರು ಉದ್ಯೋಗವಕಾಶಗಳನ್ನು ಒದಗಿಸಲಿದೆ.
ಈ ಪ್ಲಾಂಟ್ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡುವುದಾಗಿ ಅಧಿಕಾರಿ ಸಮಿತಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.