ಶ್ರೀನಗರ : ಪಾಕ್ ಸೇನೆಯು ಸೋಮವಾರ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಇಬ್ಬರು ಭಾರತೀಯ ಯೋಧರನ್ನು ಹತ್ಯೆ ಮಾಡಿದೆ.
ಮಾತ್ರವಲ್ಲದೆ, ಅವರ ಮೃತ ದೇಹಗಳನ್ನು ಛಿದ್ರಗೊಳಿಸಿ, ವಿರೂಪಗೊಳಿಸಿ ಆ ಮೂಲಕ ಹೇಡಿತನ ಮೆರೆದಿದೆ.
ಜಮ್ಮು ಪ್ರದೇಶದ ಕೃಷ್ಣಾಗಾಟಿ ಸೆಕ್ಟರ್ನಲ್ಲಿನ ವಾಸ್ತವ ಗಡಿರೇಖೆ ಬಳಿ ಬೆಳಗ್ಗೆ ೮.೩೦ ರ ಸುಮಾರಿಗೆ ಈ ಕೃತ್ಯವನ್ನು ನಡೆಸಲಾಗಿದೆ.
ಭಾರತೀಯ ಸೇನೆಯ ಜೆಸಿಒ ನಾಯರ್ ಸುಬೇದರ್ ಪರಮ್ಜಿತ್ ಸಿಂಗ್ ಮತ್ತು ಬಿಎಸ್ಎಫ್ ಹೆಡ್ಕಾನ್ಸ್ಟೇಬಲ್ ಪ್ರೇಮ್ ಸಾಗರ್ ಹುತಾತ್ಮರು.
ಪಾಕ್ನ ಈ ಕೃತ್ಯಕ್ಕೆ ತಕ್ಕ ಪ್ರತಿಕ್ರಿಯೆಯನ್ನು ನೀಡುವುದಾಗಿ ಸೇನಾ ಕಮಾಂಡರ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.