ಪುಣೆ ಮೂಲದ ಬಾಲಕಿ ತಪಸ್ವಿನಿ ಶರ್ಮಾ ‘ನಾಸಾ ಸ್ಪೇಸ್ ಸೆಟ್ಲ್ಮೆಂಟ್ ಡಿಸೈನ್ ಕಂಟೆಸ್ಟ್-2017’ನಲ್ಲಿ ಗೌರವಾನ್ವಿತ ನಮೋದನೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾಳೆ. ಈಕೆ ವಿನ್ಯಾಸಪಡಿಸಿದ ’ಕಿರಿತ್ರ ಓರ್ಬೀಸ್’ಗಾಗಿ ಈ ಪ್ರಶಸ್ತಿ ದೊರೆತಿದೆ.
ಈ ಸ್ಪರ್ಧೆಗೆ ಜಗತ್ತಿನಾದ್ಯಂತದಿಂದ 6 ಸಾವಿರ ಪ್ರಾಜೆಕ್ಟ್ಗಳು ಬಂದಿದ್ದವು. ತಪಸ್ವಿನಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ವೈಯಕ್ತಿಕ ಕೆಟಗರಿಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಳು.
ಇದೀಗ ಯುಎಸ್ಎನ ಸೈಂಟ್ ಲೂಯಿಸ್ನಲ್ಲಿ ನಡೆಯಲಿರುವ 36ನೇ ವಾರ್ಷಿಕ ಅಂತಾರಾಷ್ಟ್ರೀಯ ಸ್ಪೇಸ್ ಡೆವಲಪ್ಮೆಂಟ್ ಕಾನ್ಫರೆನ್ಸ್ನಲ್ಲಿ ಭಾಗವಹಿಸಲು ನಾಸಾ ಆಕೆಗೆ ಆಹ್ವಾನ ನೀಡಿದೆ.
ಸ್ಪೇಸ್ ಸೆಟ್ಲ್ಮೆಂಟ್ ಡಿಸೈನ್ ಕಂಟೆಸ್ಟ್ನ್ನು ನಾಸಾ ಪ್ರತಿವರ್ಷ ಜಗತ್ತಿನಾದ್ಯಂತ ನಡೆಸುತ್ತದೆ, ನಾಸಾ ವೆಬ್ಸೈಟ್ ಮೂಲಕ ಈ ಮಾಹಿತಿ ಪಡೆದು ತಪಸ್ವಿನಿ ಇದರಲ್ಲಿ ಭಾಗವಹಿಸಿದ್ದಳು. ತನ್ನ ಶಾಲೆಯ ಸಹಾಯ ಪಡೆದು ಹನಿಕೋಂಬ್ ಶೈಲಿಯ ಸ್ಪೇಸ್ ಸೆಟ್ಲ್ಮೆಂಟ್ನ್ನು ಈಕೆ ವಿನ್ಯಾಸಪಡಿಸಿದ್ದಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.