ಚೆನ್ನೈ: ಎಲ್ಲವೂ ಯೋಜನೆಯಂತೆ ನಡೆದರೆ ಶೀಘ್ರದಲ್ಲೇ ತಮಿಳುನಾಡು ಆಸ್ಪತ್ರೆಗಳ ರೋಗಾಣುಯುಕ್ತ ಬಟ್ಟೆಗಳನ್ನು ಒಗೆಯಲು ಹೊಸ ನಿಯಾಮವಳಿಗಳನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಲಿದೆ.
ಈ ಬಗೆಗಿನ ಪ್ರಕ್ರಿಯೆಗಳನ್ನು ಅಲ್ಲಿನ ಸರ್ಕಾರ ಈಗಾಗಲೇ ಆರಂಭಿಸಿದ್ದು, ದೋಭಿ ಖಾನಗಳ ಕಾರ್ಮಿಕರೊಂದಿಗೆ, ಸಂಬಂಧಪಟ್ಟ ಇತರರೊಂದಿಗೆ ಸಭೆ ನಡೆಸಿದೆ.
ರೋಗಿಗಳ ಆರೋಗ್ಯದ ಕಾಳಜಿಯೊಂದಿಗೆ ಈ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಸಾಂಪ್ರದಾಯಿಕ ದೋಭಿಗಳ ಹಿತಾಸಕ್ತಿಯನ್ನೂ ಪರಿಗಣಿಸಲಾಗುತ್ತದೆ ಎಂದು ಆರೋಗ್ಯಾಧಿಕಾರಿ ರಾಧಕೃಷ್ಣನ್ ತಿಳಿಸಿದ್ದಾರೆ.
ಮರುಬಳಸುವ ಆಸ್ಪತ್ರೆ ಪರಿಕರಗಳನ್ನು ಅಸುರಕ್ಷಿತ ರೀತಿಯಲ್ಲಿ ಸ್ವಚ್ಛ ಮಾಡಲಾಗುತ್ತದೆ ಎಂದು ಇತ್ತೀಚಿಗೆ ವರದಿಗಳು ತಿಳಿಸಿದ್ದವು. ಈ ಹಿನ್ನಲೆಯಲ್ಲಿ ಗುಣಮಟ್ಟ
ಕಾಯ್ದುಕೊಳ್ಳುವ ದೋಭಿ ಖಾನಗಳಿಗೆ ಮಾತ್ರ ಅನುಮತಿ ನೀಡಲು ಸೂಚಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.