ನವದೆಹಲಿ: ಕಲ್ಲು ತೂರಾಟದಂತಹ ಪ್ರಕರಣಗಳನ್ನು ನಿಭಾಯಿಸುವ ಸಲುವಾಗಿ ಜಮ್ಮು ಕಾಶ್ಮೀರದ ಪೊಲೀಸ್ ಬೆಟಾಲಿಯನ್ನಲ್ಲಿ ಮಹಿಳಾ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ವರದಿಗಳ ಪ್ರಕಾರ ಮಹಿಳಾ ಪೊಲೀಸ್ ಬೆಟಾಲಿಯನ್ಗೆ 1ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ. ಮಹಿಳಾ ಪೊಲೀಸರು 5 ಭಾರತೀಯ ಮೀಸಲು ಬೆಟಾಲಿಯನ್ನ ಭಾಗವಾಗಿದ್ದು, ಈಗಾಗಲೇ ಕೇಂದ್ರ ಇದಕ್ಕೆ ಅನುಮತಿ ನೀಡಿದೆ.
ಈ 5 ಬೆಟಾಲಿಯನ್ಗಳಲ್ಲೂ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, 5 ಸಾವಿರ ಹುದ್ದೆಗಳಿಗೆ 1,40,000 ಜಮ್ಮು ಕಾಶ್ಮೀರಿ ಯುವಕರು ಅರ್ಜಿ ಹಾಕಿದ್ದಾರೆ.
ಮಹಿಳಾ ಬೆಟಾಲಿಯನ್ ಕಲ್ಲು ತೂರಾಟವನ್ನು ನಿಭಾಯಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವಂತಹ ಕಾರ್ಯಗಳನ್ನು ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.