ನವದೆಹಲಿ: 2016 ರ ಸಾಲಿನಲ್ಲಿ ಮಿಲಿಟರಿಗಾಗಿ ಅತಿಹೆಚ್ಚು ಖರ್ಚು ಮಾಡಿದವರ ಜಾಗತಿಕ ಪಟ್ಟಿಯಲ್ಲಿ ಭಾರತ 5 ನೇ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದು ಹೇಳಿದೆ.
ಸತತ ಎರಡು ವರ್ಷದಲ್ಲಿ ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಮಿಲಿಟರಿಗಾಗಿ ಹೆಚ್ಚು ಖರ್ಚು ($1,168 ಬಿಲಿಯನ್) ಮಾಡಲಾಗಿದೆ. ಈ ಅವಧಿಯಲ್ಲಿ ಭಾರತ ಮಾಡಿದ ಖರ್ಚಿನಲ್ಲಿ ಶೇ.8.5 ರಷ್ಟು ಹೆಚ್ಚಾಗಿದೆ. ಇದೇ ಏಪ್ರಿಲ್ 24 ರಂದು ಸ್ಟಾಕ್ ಹೋಮ್ ಇಂಟರ್ನ್ಯಾಶನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಅಂಕಿ ಅಂಶದ ಪ್ರಕಾರ, ಯುಎಸ್ ಮೊದಲ ಸ್ಥಾನದಲ್ಲಿದ್ದು, 2015 ಮತ್ತು 2016 ಕ್ಕೆ ಹೋಲಿಸಲಾಗಿ ಶೇ. 1.7 ರಷ್ಟು ಹೆಚ್ಚು ಖರ್ಚು ಮಾಡಲಾಗಿದೆಯಂತೆ. 2 ನೇ ಸ್ಥಾನದಲ್ಲಿರುವ ಚೈನಾ ಶೇ. 5.4, ಸೌದಿ ಅರೇಬಿಯಾ ಹಾಗೂ ರಷಿಯಾ ಕ್ರಮವಾಗಿ ನಂತರದ ಸ್ಥಾನ ಪಡೆದಿವೆ.
ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸ್ಟ್ರೇಲಿಯಾ ಮೊದಲ 15 ರ ಪಟ್ಟಿಯಲ್ಲಿ ಸ್ಥಾನ ಗಳಿಸಿವೆ. ಆದರೆ ಈ ಪಟ್ಟಿಯಲ್ಲಿಯೂ ಪಾಕಿಸ್ಥಾನಕ್ಕೆ ಯಾವುದೇ ಸ್ಥಾನ ಲಭಿಸಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.