ಮಾರ್ಚ್ 14ರಿಂದ ದೆಹಲಿಯ ಜಂತರ್ ಮಂತರ್ನಲ್ಲಿ 140 ತಮಿಳುನಾಡು ಮೂಲದ ರೈತರು ಚಿತ್ರ ವಿಚಿತ್ರ ರೀತಿಯ ಪ್ರತಿಭಟನೆಗಳನ್ನು ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿಲ್ಲ. ಇದಕ್ಕಾಗಿ ಅವರ ವಿರೋಧಿಗಳು ಅವರನ್ನು ತೀವ್ರವಾಗಿ ಟೀಕಿಸಿದರೂ ಮೋದಿ ಮಾತ್ರ ಮೌನವಾಗಿದ್ದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಳಿ ಹೋಗಿ ಯೋಗ ಕ್ಷೇಮ ವಿಚಾರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಅದು ಮಾಧ್ಯಮಗಳಲ್ಲೂ ಪ್ರಸಾರವಾಗಿ ರಾಹುಲ್ ರೈತ ಕಾಳಜಿಗೆ ಅವರ ಬೆಂಬಲಿಗರಿಂದ ಬಹುಪರಾಕ್ಗಳೂ ಸಿಕ್ಕಿವೆ.
ಈ ರೈತರು ಸತ್ತ ಹಾವು, ಇಲಿ ತಿನ್ನುವ ಮೂಲಕ, ಅರೆನಗ್ನರಾಗುವ ಮೂಲಕ, ತಲೆಬುರುಡೆ ಹಿಡಿದು ಚಿತ್ರ ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದರು, ಮೂತ್ರ ಕುಡಿಯುವ ಮತ್ತು ಪ್ರಧಾನಿ ಕಛೇರಿಗೆ ನುಗ್ಗುವ ಬೆದರಿಕೆಯನ್ನೂ ಹಾಕಿದರು. ಆದರೆ ಕೇಂದ್ರ ಸರ್ಕಾರ ಎಂದಿಗೂ ಈ ರೈತರಿಗೆ ಪ್ರಾಮುಖ್ಯತೆ ಕೊಡಲೇ ಇಲ್ಲ. ಇದಕ್ಕೆ ಹಲವಾರು ಕಾರಣಗಳೂ ಇವೆ. ಈ ರೈತರು ಅಸಲಿಗೆ ರೈತರೇ ಅಲ್ಲ. ಎನ್ಜಿಓವೊಂದು ಮೋದಿ ಹೆಸರನ್ನು ಹಾಳು ಗೆಡವಲು ಕಳುಹಿಸಿದ ಪೇಯ್ಡ್ ನಕಲಿ ರೈತರು ಎಂಬ ನಿಜಾಂಶ ಇದೀಗ ಬಯಲಾಗಿದೆ.
ಈ ನಕಲಿ ರೈತರು ಕೇಳಿರುವ ಬರ ಪರಿಹಾರ ಬರೋಬ್ಬರಿ 40 ಸಾವಿರ ಕೋಟಿ, ಇಷ್ಟೊಂದು ಮೊತ್ತವನ್ನು ಯಾವ ಸರ್ಕಾರವೂ ನೀಡುವ ಭರವಸೆಯನ್ನು ನೀಡಿಲ್ಲ. ಕೇಂದ್ರ ಈಗಾಗಲೇ ತನ್ನ ಬರ ಪರಿಹಾರ ಮೊತ್ತ 2014.43 ಕೋಟಿ ರೂಪಾಯಿಯನ್ನು ತಮಿಳುನಾಡಿಗೆ ನೀಡಿದೆ ಅದನ್ನು ನೀಡದೇ ಇದ್ದುದು ಆ ಸರ್ಕಾರದ ತಪ್ಪು.
So these r Farmers? Getting packed food from South Indian restaurant with Mineral water?
They are NGO worker? attempt to divide North-South pic.twitter.com/CPgQeFIoHk
— #GauravPradhan 🇮🇳 (@DrGPradhan) April 22, 2017
#tamilnadufarmers DRAMA EXPOSED
Pls keep an eye on Media PIMPs
If u see any of these pix, U know it was STAGED to defame @narendramodi ji pic.twitter.com/VOfOQg2Cyl
— #GauravPradhan 🇮🇳 (@DrGPradhan) April 23, 2017
ಅಸಲಿಗೆ ಇವರೆಲ್ಲಾ ಎನ್ಜಿವೊ ಕಳುಹಿಸಿದ ಪೇಯ್ಡ್ ರೈತರೇ ಹೊರತು ಅಸಲಿ ರೈತರಲ್ಲ. ಕೇಂದ್ರಕ್ಕೆ ಮಸಿ ಬಳಿಯುವ ಹುನ್ನಾರ ಇವರದ್ದಾಗಿತ್ತು. ಇವರು ಹೋರಾಟ ಮಾಡುತ್ತಿದ್ದ ಸ್ಥಳಕ್ಕೆ ಬಿಸ್ಲರಿ ವಾಟರ್, ಫುಡ್ಗಳೂ ಸಪ್ಲೇ ಆಗುತ್ತಿದ್ದವು. ಸೇನೆಯ ವಿರುದ್ಧ ಅಪಪ್ರಚಾರ ಮಾಡುವವರು, ಅಫ್ಜಲ್ ಗುರುವಿನ ಸಮರ್ಥಕರು, ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದವರು ಈ ಗುಂಪಿನಲ್ಲಿದ್ದರು ಎಂಬುದು ಸಾಕ್ಷಿ ಸಮೇತ ಸಾಬೀತಾಗಿದೆ.
ಕೇಂದ್ರ ಇವರ ಗಿಮಿಕ್ಗೆ ಸೊಪ್ಪು ಹಾಕದ ಹಿನ್ನಲೆಯಲ್ಲಿ ಇವರು ತಮ್ಮ ಪ್ರತಿಭಟನೆಯನ್ನು ಇದೀಗ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ನಿಜಾಂಶ ತಿಳಿಯದೆ ಸರ್ಕಾರದ ಮೇಲೆ ಗೂಬೆ ಕೂರಿಸುವವರು ಈ ಬಗ್ಗೆ ತುಸು ವಿಮರ್ಶಿಸಿಕೊಳ್ಳುವುದು ಒಳಿತು.
source : postcard.news
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.