ಧಾರವಾಡ: ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ವಸತಿ ವ್ಯವಸ್ಥೆಯನ್ನು ಕಲ್ಪಿಸುವ, ಅಸಹಾಯಕರಿಗೆ ಶೈಕ್ಷಣಿಕ ಸಹಾಯ ಮಾಡುವ ಇತ್ಯಾದಿ ಕಾರ್ಯಗಳ ಮೂಲಕ ಶಿವಕೃಪಾ ಟ್ರಸ್ಟ್ ಗುರುತಿಸಿಕೊಂಡಿದೆ.
ಇಲ್ಲಿನ ರಾಮನಗರದಲ್ಲಿ 1981 ರಲ್ಲಿಯೇ ಸ್ವಂತ ಕಟ್ಟಡದಲ್ಲಿ ಈ ಟ್ರಸ್ಟ್ ಆರಂಭವಾಯಿತು. ನೋಂದಣಿಯೂ ಆಗಿದೆ. 2013 ರಿಂದ ಪ್ರತಿ ವರ್ಷ ಮಾ.23 ರಂದು ರಕ್ತದಾನ ಶಿಬಿರ ಆಯೋಜಿಸುತ್ತ ಬರಲಾಗಿದೆ. ಸ್ವಾತಂತ್ರ್ಯ ವೀರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು, ತಾಯಿ ಭಾರತ ಮಾತೆಗಾಗಿ ನೇಣಿಗೆ ಕೊರಳೊಡ್ಡಿದ ದಿನ ಮಾ.23. ಅವರ ನೆನಪಿನಲ್ಲಿ ಈ ಕಾರ್ಯಕ್ಕೆ ಟ್ರಸ್ಟ್ ಮುಂದಾಗಿತ್ತು ಎನ್ನುತ್ತಾರೆ ಟ್ರಸ್ಟ್ನ ಕಾರ್ಯದರ್ಶಿ ವೆಂಕಟೇಶ ಕರಿಕಲ್
2014, 15 ಮತ್ತು 16ರಲ್ಲಿ ಮಾ.23 ರ ಬದಲಿಗೆ ಡಾ.ಅಂಬೇಡ್ಕರ್ ಅವರ ಜನ್ಮದಿನ ಏ.14 ರಂದು ರಕ್ತದಾನ ಶಿಬಿರ ಆಯೋಜಿಸಿದ್ದೇವೆ. ರಾಷ್ಟ್ರೋತ್ಥಾನ ರಕ್ತನಿಧಿ ಹಾಗೂ ಧಾರವಾಡ ಜಿಲ್ಲಾ ಆಸ್ಪತ್ರೆಗಳು ಶಿಬಿರದಲ್ಲಿ ಸಂಗ್ರಹಿಸಿದ ರಕ್ತವನ್ನು ತಮ್ಮ ಬ್ಲಡ್ ಬ್ಯಾಂಕ್ನಲ್ಲಿಡುತ್ತವೆ.
ರಕ್ತದೊತ್ತಡ, ಮಧುಮೇಹ ಇತ್ಯಾದಿ ರೋಗವುಳ್ಳವರನ್ನು ತಪಾಸಣೆ ಮಾಡಲಾಗುತ್ತದೆ. ಮುಂದಿನ ವರ್ಷದಿಂದ ಚಿಕ್ಕ ಮಕ್ಕಳ ಆರೋಗ್ಯ ತಪಾಸಣೆಯನ್ನೂ ನಡೆಸಬೇಕೆಂದು ಅಂದುಕೊಂಡಿದ್ದೇವೆ. ಗೆಳೆಯರ ಬಳಗ, ಹಿರಿಯರು, ನಾಗರಿಕರು, ವೃತ್ತಿಪರರು ನಮ್ಮ ಈ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎನ್ನುತ್ತಾರೆ ವೆಂಕಟೇಶ್ ಅವರು.
ತಮ್ಮ ಟ್ರಸ್ಟ್ ಹಾಗೂ ಈ ರೀತಿಯ ಸಾಮಾಜಿಕ ಕಾರ್ಯಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪರ್ಕವೇ ಮೂಲ ಕಾರಣ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ ಅವರು. 2017ನೇ ಸಾಲಿನ ರಕ್ತದಾನ ಶಿಬಿರವನ್ನು ಏಪ್ರಿಲ್ 14 ರಂದು ಆಯೋಜಿಸಲಾಗಿದೆ. ಹಿರಿಯ ವೈದ್ಯರಿಂದ ಉಪನ್ಯಾಸವೂ ಇರುತ್ತದೆ. ದಲಿತ ನಾಯಕರೂ ಈ ಕಾಂiiಕ್ರಮದಲ್ಲಿ ಭಾಗವಹಿಸುವಂತಾಗಲಿ ಎಂದು ಅವರು ಆಶಿಸಿದ್ದಾರೆ.
ಶಿವಕೃಪಾ, ಆದರ್ಶ ಬಾಲಿಕಾ ಶಾಲೆ ಎದುರುಗಡೆ, ರಾಮನಗರ ಧಾರವಾಡ. ಸಮಯ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ವೆಂಕಟೇಶ ಕರಿಕಲ್ 8970587999 ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.