ಗೋರೆಗಾಂವ್ : ಆಸ್ಟ್ರೇಲಿಯಾ ಸರ್ಕಾರ, ಅಲ್ಲಿನ ಶಿಕ್ಷಣ ಮತ್ತು ತರಬೇತಿ ಸಚಿವ ಸಿಮೋನ್ ಬರ್ಮಿಂಗ್ಹ್ಯಾಮ್ ಅವರು 11 ಭಾರತೀಯ ಸಂಶೋಧನಾ ವಿದ್ಯಾರ್ಥಿಗಳಿಗೆ 1.1 ಮಿಲಯನ್ ಆಸ್ಟ್ರೇಲಿಯನ್ ಡಾಲರ್ ಸ್ಕಾಲರ್ಶಿಪ್ ಘೋಷಿಸಿದ್ದಾರೆ.
ಇದರನ್ವಯ ಮೂರು ವರ್ಷಗಳ ಕಾಲ ಈ 11 ಸಂಶೋಧನಾ ವಿದ್ಯಾರ್ಥಿಗಳು ಉಚಿತ ಟ್ಯೂಷನ್ ಪಡೆಯಲಿದ್ದಾರೆ.
ಗೋರೆಗಾಂವ್ನ TERI-Deakin Nanobiotechnology Centre (TDNBC) ಗೆ ಭೇಟಿ ನೀಡಿದ ಸಿಮೋನ್ ಸ್ಕಾಲರ್ಶಿಪ್ ಘೋಷಣೆ ಮಾಡಿದ್ದಾರೆ. Deakin ಸೆಂಟರ್ನಲ್ಲಿ ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ನ್ನು ಪಡೆಯಲಿದ್ದಾರೆ. ಪ್ರತಿಯೊಬ್ಬರೂ ತಲಾ 100 ಸಾವಿರ ಮೊತ್ತದ 3 ವರ್ಷಗಳ ಉಚಿತ ಟ್ಯೂಷನ್ ಪಡೆಯಲಿದ್ದಾರೆ.
ಅಲ್ಲದೆ 6 ರಿಂದ 7 ತಿಂಗಳುಗಳ ಕಾಲ ಆಸ್ಟ್ರೇಲಿಯಾದ ಡಿಯಾಕಿನ್ ಯುನಿವರ್ಸಿಟಿಗೆ ತೆರಳಿ ಸಂಶೋಧನೆಯನ್ನು ಮಾಡುವ ಅವಕಾಶವನ್ನೂ ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.