ನವದೆಹಲಿ : ಹೆಚ್ಐವಿ ಪೀಡಿತರನ್ನು ಯಾವುದೇ ರೀತಿಯ ತಾರತಮ್ಯಗಳಿಂದ ರಕ್ಷಿಸುವ ಸಲುವಾಗಿ ಲೋಕಸಭೆಯಲ್ಲಿ ಹೆಚ್ಐವಿ / ಏಡ್ಸ್ ಮಸೂದೆಯನ್ನು ಅಂಗೀಕಾರಗೊಳಿಸಲಾಯಿತು.
ಚಿಕಿತ್ಸೆ, ಉದ್ಯೋಗ ಮತ್ತು ಕಾರ್ಯದ ಸ್ಥಳಗಳಲ್ಲಿ ಹೆಚ್ಐವಿ ಪೀಡಿತರ ವಿರುದ್ಧ ಮಾಡಲಾದ ತಾರತಮ್ಯ, ದೌರ್ಜನ್ಯಗಳನ್ನು ತಡೆಯಲು ಈ ಮಸೂದೆ ಸಹಾಯಕವಾಗಲಿದೆ.
ಹೆಚ್ಐವಿ / ಏಡ್ಸ್ ಮಸೂದೆ ಮಾರಕ ಕಾಯಿಲೆಯನ್ನು ತಡೆಯುವ ಮತ್ತು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೆ ಹೆಚ್ಐವಿ ಪೀಡಿತರ ಮಾನವ ಹಕ್ಕನ್ನು ಎತ್ತಿ ಹಿಡಿಯಲಿದೆ.
‘ಹೆಚ್ಐವಿಯಂತಹ ಮಾರಕ ಕಾಯಿಲೆಗಳಿಗೆ ಒಳಗಾದವರಿಗೆ ಕಾನೂನಿನ ರಕ್ಷಣೆಯನ್ನು ನೀಡಿ ಅವರ ಶ್ರೇಯೋಭಿವೃದ್ಧಿ ಮಾಡಲು ಈ ಕಾನೂನು ಸಹಕಾರಿಯಾಗಿದೆ’ ಎಂದು ಆರೋಗ್ಯ ಮಂತ್ರಿ ಜೆ.ಪಿ. ನಡ್ಡಾ ತಿಳಿಸಿದ್ದಾರೆ.
ಸರ್ಕಾರವು ಹೆಚ್ಐವಿ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಲಿದೆ. ಆರೋಗ್ಯ ಸಚಿವಾಲಯವು ಹೊಸ ಪರೀಕ್ಷೆ ಮತ್ತು ಚಿಕಿತ್ಸಾ ನಿಯಮವನ್ನು ರಚಿಸಲಿದೆ ಎಂದು ನಡ್ಡಾ ಹೇಳಿದ್ದಾರೆ.
ಮಾರ್ಚ್ 21 ರಂದು ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.