ಮುಂಬಯಿ: ಆರ್ಯ ಸಮಾಜದ ನೂರನೇ ವರ್ಷಾಚರಣೆಯ ಹಿನ್ನಲೆಯಲ್ಲಿ 1975ರ ಎಪ್ರಿಲ್ 10ರಂದು ಭಾರತೀಯ ಅಂಚೆ ಇಲಾಖೆ ಆರ್ಯ ಸಮಾಜದ ಬಗೆಗಿನ 3 ಲಕ್ಷ ಅಂಚೆ ಚೀಟಿಗಳನ್ನು ಬಿಡುಗಡೆಗೊಳಿಸಿತ್ತು. ಈ ಅಂಚೆ ಚೀಟಿಗಳು ಇದೀಗ 42 ವರ್ಷಗಳನ್ನು ಪೂರೈಸಿದೆ.
ಸಮಾಜ ಸುಧಾರಕ ಸ್ವಾಮಿ ದಯಾನಂದ ಸರಸ್ವತಿ ಅವರು 1875ರ ಎಪ್ರಿಲ್ 7ರಂದು ಬಾಂಬೆಯಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು. ವೇದಿಕ್ ಧರ್ಮ ಮತ್ತು ಆರ್ಯ ಸಂಸ್ಕೃತಿಯನ್ನು ಪುನಃಶ್ವೇಚತನಗೊಳಿಸುವುದು ಮತ್ತು ಪ್ರಚಾರಪಡಿಸುವುದೇ ಆರ್ಯ ಸಮಾಜ ಸ್ಥಾಪನೆಯ ಬಹುಮುಖ್ಯ ತತ್ವವಾಗಿತ್ತು.
ತನ್ನ ಈ ತತ್ವಗಳ ಸಾಧನೆಯೆಡೆಗೆ ಪಯಣಿಸುತ್ತಾ ಪಯಣಿಸುತ್ತಾ ಆರ್ಯ ಸಮಾಜ ಒಂದು ವಿಶ್ವ ಚಳುವಳಿಯಾಗಿಯೇ ರೂಪುಗೊಂಡಿತ್ತು. ಅಸತ್ಯವನ್ನು ತಿರಸ್ಕರಿಸಿ, ಸತ್ಯವನ್ನು ಪುರಸ್ಕರಿಸುವುದಕ್ಕೆ ಇದು ಕರೆ ನೀಡಿತು. ಜನರನ್ನು ದೈಹಿಕವಾಗಿ ಸದೃಢಗೊಳಿಸುವುದು, ಆಧ್ಯಾತ್ಮಿಕವಾಗಿ ಪ್ರಬುದ್ಧಗೊಳಿಸುವುದು, ಉನ್ನತಿಗೊಳಿಸುವ ಮೂಲಕ ಜಗತ್ತಿಗೆ ಒಳ್ಳೆಯದನ್ನು ಮಾಡುವುದು ಇದರ ಬಹು ಮುಖ್ಯ ಕಾರ್ಯವಾಗಿತ್ತು. ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ ಇದು ಪ್ರೀತಿ, ನ್ಯಾಯ, ಸರಿಮಾರ್ಗದ ಬಗ್ಗೆ ಬೋಧಿಸಿದೆ. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳನ್ನು ತಂದು ಆಧುನಿಕ ಭಾರತದ ನಿರ್ಮಾಣದಲ್ಲಿ ಆರ್ಯಸಮಾಜ ಬಹುಮುಖ್ಯ ಪಾತ್ರವನ್ನು ನಿಭಾಯಿಸಿದೆ.
ದಯಾನಂದ ಸರಸ್ವತಿ ಅವರು ಆಧುನಿಕ ಭಾರತ ನಿರ್ಮಾತೃಗಳಲ್ಲಿ ಒಬ್ಬರು. ದೇಶೀಯ ಅಂಶಗಳೊಂದಿಗೆ ಅವರು ಹೊಸ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಸುಧಾರಣೆಗಳನ್ನು ತರಲು ಇವರು ಬಯಸಿದ್ದರು. ವೇದಗಳಿಂದ ಸ್ಫೂರ್ತಿ ಪಡೆದ ಇವರು ಮೂರ್ತಿ ಪೂಜೆ, ಜಾತಿ ಪದ್ಧತಿ, ಅಸ್ಪೃಶ್ಯತೆಗಳನ್ನು ನಿವಾರಿಸಲು ಮುಂದಾಗಿದ್ದರು.
ನಾಲ್ಯದಲ್ಲಿ ಮೂಲ್ಶಂಕರ್ ಎಂದು ಕರೆಯಲ್ಪಡುತ್ತಿದ್ದ ಇವರು, ೧೮೨೪ರಲ್ಲಿ ಗುಜರಾತ್ನ ಕಾತಿವಾರದ ತಂಕರದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಕುಟುಂಬದಿಂದಲೇ ಮೊದಲ ಶಿಕ್ಷಣ ಪಡೆದು ಇವರು ವೇದಿಕ್ ಪಂಡಿತನಾಗಿ ರೂಪುಗೊಂಡರು. ಬಳಿಕ ಲೌಕಿಕ ಬದುಕನ್ನು ತೊರೆದು ಜ್ಞಾನ ಮತ್ತು ಸತ್ಯದ ಅನ್ವೇಷಣೆಗಾಗಿ ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚರಿಸತೊಡಗಿದರು.
ಕೊನೆಗೆ ಮಥುರಾದಲ್ಲಿ ಸ್ವಾಮಿ ವ್ರಜಾನಂದ ಅವರನ್ನು ಭೇಟಿಯಾಗಿ ಅವರ ಶಿಷ್ಯರಾದರು. ಅವರಿಂದ ಶಿಕ್ಷಣ ಪಡೆದ ಬಳಿಕ ದೇಶದಾದ್ಯಂತ ಸಂಚರಿಸಿ ನಿಜವಾದ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಪಸರಿಸತೊಡಗಿದರು. ಇದೇ ಗುರಿಯೊಂದಿಗೆ ಅವರು ಬಾಂಬೆಯಲ್ಲಿ ಎ.10, 1975ರಂದು ಆರ್ಯ ಸಮಾಜವನ್ನೂ ಸ್ಥಾಪಿಸಿದರು. ಇಲ್ಲಿ ನಡೆದ ಸಭೆಯಲ್ಲಿ ಒಟ್ಟು ೨೮ ನಿಯಮಗಳಿಗೆ ಸದಸ್ಯರು ಅನುಮೋದನೆ ನೀಡಿದರು.
ಉತ್ತಮ ಬರಹಗಾರನಾದ ಸರಸ್ವತಿ ಅವರು ಸತ್ಯಾರ್ಥ ಪ್ರಕಾಶ, ರತ್ನಮಾಲಾ, ಸಂಕರ್ವಿಧಿ, ವೇದಾಂಗ್ ಪ್ರಕಾಶ್, ಭಾರತೀನಿರ್ವಾಣ ಕೃತಿಗಳನ್ನು ರಚಿಸಿದ್ದಾರೆ. ದೇಶದಾದ್ಯಂತ ಸಂಚರಿಸಿ ತಮ್ಮ ಸಿದ್ಧಾಂತ ಪ್ರಚಾರ ಪಡಿಸಿದ ಇವರು ಹಲವಾರು ಕಡೆಗಳಲ್ಲಿ ಆರ್ಯಸಮಾಜದ ಕೇಂದ್ರಗಳನ್ನು ತೆರೆದರು.
ವೇದ ಒಂದೇ ಸತ್ಯದ ಮೂಲವೆಂದು ಪರಿಗಣಿಸುವುದು, ಮೂರ್ತಿ ಪೂಜೆ ತಿರಸ್ಕರಿಸುವುದು, ಹೆಣ್ಣು ಮಕ್ಕಳಿಗೆ ಶಿಕ್ಷಣ, ಬಹುಪತ್ನಿತ್ವ ಮತ್ತು ಬಾಲ್ಯವಿವಾಹವನ್ನು ವಿರೋಧಿಸುವುದು, ಹಿಂದಿ ಮತ್ತು ಸಂಸ್ಕೃತ ಭಾಷೆಗಳನ್ನು ಪ್ರಚುರಪಡಿಸುವುದು ಆರ್ಯ ಸಮಾಜದ ಮುಖ್ಯ ತತ್ವಗಳಾಗಿವೆ.
ಆರ್ಯ ಸಮಾಜದ ನೂರನೇ ವರ್ಷಾಚರನೆಯ ಹಿನ್ನಲೆಯಲ್ಲಿ 1975ರಂದು ವಿಶೇಷ ಅಂಚೆ ಚೀಟಿಗಳನ್ನು ಅಂಚೆ ಇಲಾಖೆ ಹೊರ ತಂದಿತ್ತು.
Courtesy : Stamp Today
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.