ಲಕ್ನೋ: ಗೋವಿಗೆ ಮೇವು ನೀಡುತ್ತಿರುವ ಭಂಗಿಯಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರ ಮೇಣದ ಪ್ರತಿಮೆಯನ್ನು ಮುಸ್ಲಿಂ ಯುವಕನೊಬ್ಬ ರಚಸಿದ್ದಾನೆ. ರಾಮನವಮಿಯ ಪ್ರಯುಕ್ತ ಈ ಪ್ರತಿಮೆಯನ್ನು ಸಿಎಂ ಅವರಿಗೆ ಉಡುಗೊರೆಯಾಗಿ ನೀಡಲು ಆತ ಬಯಸಿದ್ದಾನೆ.
10cm x 6cm ಅಳತೆಯ ಪ್ರತಿಮೆ ಇದಾಗಿದೆ. ಮಾಧ್ಯಮಗಳಲ್ಲಿ ಯೋಗಿ ಅವರು ಗೋವಿಗೆ ಹುಲ್ಲು ನೀಡುತ್ತಿರುವ ಚಿತ್ರಗಳನ್ನು ನೋಡಿ ಅದರಿಂದ ಪ್ರೇರಿತಗೊಂಡ 12ನೇ ತರಗತಿಯ ವಿದ್ಯಾರ್ಥಿ ಅಮಿಖ್ ಖಾನ್ ಈ ಪ್ರತಿಮೆಯನ್ನು ರಚಿಸಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮಿಖ್, ನನ್ನ ಈ ಸೃಜನಶೀಲ ಕಾರ್ಯವನ್ನು ಸಿಎಂ ಅವರಿಗೆ ರಾಮನವಮಿಯಂದು ಉಡುಗೊರೆಯಾಗಿ ನೀಡಲು ಬಯಸುತ್ತೇನೆ. ನಮ್ಮ ತನವನ್ನು ಅಭಿವ್ಯಕ್ತಿಗೊಳಿಸಲು ಮತ್ತು ಭಾವನೆಗಳನ್ನು ಹೊರತರಲು ಕಲೆ ಒಂದು ಅದ್ಭುತ ಮಾಧ್ಯಮ. ಸಿಎಂ ಈ ಪ್ರತಿಮೆಯನ್ನು ಸ್ವೀಕರಿಸಿದರೆ ನನಗೆ ಅತೀವ ಸಂತಸವಾಗುತ್ತದೆ ಎಂದಿದ್ದಾನೆ.
ಈ ಹಿಂದೆಯೂ ಅಮಿಖ್ ಅಬ್ದುಲ್ ಕಲಾಂ, ಅಖಿಲೇಶ್ ಸಿಂಗ್ ಯಾದವ್ ಅವರ ಮೇಣದ ಪ್ರತಿಮೆಯನ್ನು ನಿರ್ಮಿಸಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.