ನವದೆಹಲಿ: ಮುಂದಿನ ತಿಂಗಳಿಗೆ ಆಡಳಿತಕ್ಕೆ ಬಂದು 3 ವರ್ಷಗಳನ್ನು ಪೂರೈಸಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತನ್ನ ಸಾಧನೆಗಳ ಬಗ್ಗೆ ರಿಪೋರ್ಟ್ ಕಾರ್ಡ್ ತಯಾರಿಸಲು ಮುಂದಾಗಿದೆ. ಈ ಮೂಲಕ ತನ್ನ ಮೇಲೆ ಆರೋಪ ಹೊರಿಸುತ್ತಿರುವ ಪ್ರತಿಪಕ್ಷಗಳಿಗೆ ಟಾಂಗ್ ನೀಡಲು ಸಜ್ಜಾಗಿದೆ.
3ನೇ ವರ್ಷಾಚರಣೆಯ ಸಂದರ್ಭ ತನ್ನ ರಿಪೋರ್ಟ್ ಕಾರ್ಡ್ನ್ನು ಜನರ ಮುಂದಿಡಲು ಅದು ನಿರ್ಧರಿಸಿದೆ, 3 ವರ್ಷದಲ್ಲಿ ತಾನು ಮಾಡಿದ ಸಾಧನೆಗಳ ಪಟ್ಟಿ ಇದರಲ್ಲಿರಲಿದೆ. ಮಾತ್ರವಲ್ಲ ರಾಜಕೀಯ ಆರೋಪಗಳಿಗೆ ತಿರುಗೇಟು ನೀಡುವಂತಹ ಅಂಶಗಳೂ ಇದರಲ್ಲಿ ಇರಲಿವೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ನಿಖರ, ದಾಖಲೆ, ಅಂಕಿಅಂಶಗಳನ್ನು ಈ ರಿಪೋರ್ಟ್ ಒಳಗೊಳ್ಳಲಿದೆ. ಎಲ್ಲಾ ಸಚಿವಾಲಯಗಳೂ ಇದರ ತಯಾರಿಯಲ್ಲಿ ನಿರತವಾಗಿವೆ.
ಮೇ 26ರಂದು ಎನ್ಡಿಎ ಸರ್ಕಾರ ಆಡಳಿತಕ್ಕೆ ಬಂದು 3 ವರ್ಷ ಪೂರೈಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.