ಅಹ್ಮದಾಬಾದ್: ಕಳೆದ ಐದು ವರ್ಷಗಳಿಂದ ಗುಜರಾತಿನ ಘಿರ್ ಅಭಯಾರಣ್ಯದಲ್ಲಿ ಏಷಿಯಾಟಿಕ್ ಸಿಂಹಗಳ ಸಂಖ್ಯೆ ಹೆಚ್ಚಳವಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ 5 ವರ್ಷದಲ್ಲಿ ಸಿಂಹಗಳ ಸಂಖ್ಯೆ ಶೇ.27ರಷ್ಟು ಏರಿಕೆಯಾಗಿದೆ ಎಂಬ ಸುದ್ದಿ ನನಗೆ ಅತೀವ ಸಂತಸವನ್ನು ತಂದಿದೆ. ಇದಕ್ಕಾಗಿ ನಾನು ಸ್ಥಳಿಯರನ್ನು, ಅಧಿಕಾರಿಗಳನ್ನು ಮತ್ತು ಪ್ರಾಣಿ ಪ್ರಿಯರನ್ನು ಅಭಿನಂದಿಸುತ್ತೇನೆ. ಅವರ ಶ್ರಮದಿಂದಾಗಿ ಇದು ಸಾಧ್ಯವಾಗಿದೆ ಎಂದು ಮೋದಿ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರೂ ಸಿಂಹಗಳ ಸಂಖ್ಯೆ ಹೆಚ್ಚಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು, ಇದು ಸಂತೋಷ ಮತ್ತು ಹೆಮ್ಮೆಯ ಸಂಗತಿ ಎಂದಿದ್ದಾರೆ.
ಇತ್ತೀಚಿಗೆ ಬಿಡುಗಡೆಯಾಗಿರುವ ಸಮೀಕ್ಷೆಯ ಪ್ರಕಾರ ಘಿರ್ ಅಭಯಾರಣ್ಯದಲ್ಲಿ ಸಿಂಹಗಳ ಸಂಖ್ಯೆ ಕಳೆದ ಐದು ವರ್ಷದಲ್ಲಿ 411ರಿಂದ 523ಕ್ಕೆ ಏರಿಕೆಯಾಗಿದೆ.
2015ರ ಮೇ 2ರಿಂದ 5ರವರೆಗೆ ಸಮೀಕ್ಷೆಯನ್ನು ನಡೆಸಲಾಗಿತ್ತು, ಹೆಣ್ಣು ಸಿಂಹಗಳ ಸಂಖ್ಯೆ ಗಂಡು ಸಿಂಹಗಳಿಗಿಂತ ದುಪ್ಪಟ್ಟು ಇದೆ ಎಂದೂ ಸಮೀಕ್ಷೆಯಿಂದ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.