ಚೆನ್ನೈ: ಚೆನ್ನೈ ಮೂಲದ 18 ವರ್ಷದ ಬಾಲಕ ನಾಸಾ ಅಮೆಸ್ ಸ್ಪೇಸ್ ಸೆಟ್ಲ್ಮೆಂಟ್ ಸ್ಪರ್ಧೆ ೨೦೧೭ರ ಗ್ರೇಡ್ ೧೨ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದ್ದಾನೆ.
ಸಾಯಿ ಕಿರಣ್ ಪಿ. ಮಾನವನ ವಾಸಕ್ಕೆ ಸಾಧ್ಯವಾಗುವಂತೆ ಭೂಮಿಯಿಂದ ಚಂದ್ರನ ನಡುವೆ ಸಂಪರ್ಕಕ್ಕೆ ಎಲವೇಟರ್ ಬಳಕೆಗೆ ಪ್ರಸ್ತಾಪಿಸಿದ್ದಾಗಿ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡಿದ್ದಾನೆ.
ವರದಿಗಳ ಪ್ರಕಾರ, ಸಾಯಿ ಕಿರಣ್ನ ಪ್ರಾಜೆಕ್ಟ್ ‘ಕನೆಕ್ಟಿಂಗ್ ಮೂನ್, ಅರ್ಥ್ ಎಂಡ್ ಸ್ಪೇಸ್’ ಹಾಗೂ ‘ ಸ್ಪೇಸ್ ಹ್ಯಾಬಿಟ್ಯಾಟ್’ ಚಂದ್ರನಲ್ಲಿ ಮಾನವ ನೆಲೆಸಲು ಅವರನ್ನು ಸಾಗಿಸಲು ಎಲೆವೇಟರ್ ಬಳಸುವ ಬಗ್ಗೆ ಉಲ್ಲೇಖಿಸುತ್ತದೆ.
ಸಾಯಿ ಕಿರಣ್ ಈ ಪ್ರಾಜೆಕ್ಟ್ ಮೇಲೆ ೨೦೧೩ರಲ್ಲಿ ಕೆಲಸ ಆರಂಭಿಸಿದ್ದು, ಈ ವಿಷಯದ ಬಗ್ಗೆ ವಿವರವಾದ ಪ್ರಬಂಧ ಬರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.