ನವದೆಹಲಿ: ಮಂಗಳವಾರ ಮತ್ತೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಉತ್ತರ ಭಾರತದಲ್ಲಿ 44 ಮಂದಿ ಸಾವಿಗೀಡಾಗಿದ್ದಾರೆ. ನೇಪಾಳದಲ್ಲಿ ಸಾವಿನ ಸಂಖ್ಯೆ 65ಕ್ಕೇರಿದೆ. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ನೇಪಾಳದ ಹಿಮಾಲಯಗಳಲ್ಲಿ ಭೂಕುಸಿತವಾಗುತ್ತಿದ್ದು ಜನ ಭಯಭೀತಗೊಂಡು ಬೊಬ್ಬಿಡುತ್ತಿದ್ದರು. ಅಲ್ಲದೇ ನೆರೆಯ ಭೀತಿಯೂ ಉದ್ಭವಿಸಿದೆ.
ಇನ್ನು ಭಾರತದ ಬಿಹಾರದಲ್ಲಿ 42 ಮಂದಿ ಮತ್ತು ಉತ್ತರಪ್ರದೇಶದಲ್ಲಿ 2 ಮಂದಿ ಭೂಕಂಪನದಿಂದಾಗಿ ಮೃತಪಟ್ಟಿದ್ದಾರೆ, ಟಿಬೆಟ್ನಲ್ಲೂ ಒಬ್ಬರು ಮೃತರಾಗಿದ್ದಾರೆ.
ಭಾರತ, ಚೀನಾ, ಪಾಕಿಸ್ತಾನ ಸೇರಿದಂತೆ ವಿವಿಧ ಕಡೆ ನಿನ್ನೆ 7.3 ತೀವ್ರತೆಯ ಭೂಕಂಪನವಾಗಿದೆ. ಇದರಿಂದ ನೇಪಾಳ ಮತ್ತು ಭಾರತದಲ್ಲಿ ಹೆಚ್ಚು ಹಾನಿಗಳು ಸಂಭವಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.