ದೆಹಲಿ : ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸಿಎಜಿ ವರದಿ ಪ್ರಕಾರ ಭ್ರಷ್ಟಾಚಾರದ ಆರೊಪವಿದೆ ಆದುದರಿಂದ ಅವರು ಸಚಿವ ಸ್ಧಾನದಿಂದ ಕೆಳಗಿಸಬೇಕೆಂಬ ಪ್ರತಿಪಕ್ಷಗಳ ಪಟ್ಟಿಗೆ ಸಚಿವ ಗಡ್ಕರಿ ಪ್ರತಿಕ್ರಿಯಿಸಿದ್ದಾರೆ.
ಪ್ರಪಂಚದ ಯಾವುದೇ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಒಂದು ರೂಪಾಯಿಯಷ್ಟಾದರೂ ಭ್ರಷ್ಟಾಚಾರದ ಆರೋಪ ಸಾಬೀತಾದರೆ ಕೇವಲ ಸಚಿವ ಸ್ಧಾನವಲ್ಲ ಸಂಸದಸ್ಧಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.
ಸಿಎಜಿ ವರದಿಯಲ್ಲಿ ನನ್ನ ಹೆಸರಿಲ್ಲ. ನನ್ನ ಕುಟುಂಬ ಮತ್ತು ಪೂರ್ತಿ ಸಮೂಹ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ. ಅದಕ್ಕೆ ನಾನು ಏನು ಸಹಾಯವೂ ಮಾಡಿಲ್ಲ. ನನ್ನ ಹೆಸರನ್ನು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಇದು ರಾಜಕೀಯ ಪ್ರೇರಿತವಾಗಿದೆ ಎಂದರು. ಆದರೆ ಇದನ್ನು ಒಪ್ಪದ ವಿರೋಧ ಪಕ್ಷಗಳು ಕಲಾಪವನ್ನು ಮುಂದೂಡುವಂತೆ ಮಾಡಿತು. ಕಳೆದ 3 ದಿನಗಳಿಂದ ಕಾಂಗ್ರೆಸ್ ಇದೇ ರೀತಿ ವರ್ತಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.