ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್ಎನ್ಎಲ್ ‘ 249ಕ್ಕೆ ಅನಿಯಮಿತ ಬ್ರಾಡ್ಬ್ಯಾಂಡ್ ಆಫರ್’ ಭಾಗವಾಗಿ ಗ್ರಾಹಕರಿಗೆ 10 ಜಿಬಿ ಡಾಟಾ ಒದಗಿಸಲು ಆರಂಭಿಸಿದೆ. ಗ್ರಾಹಕರಿಗೆ ಮಾಸಿಕ 249 ರೂ. ದರದಲ್ಲಿ ಪ್ರತಿ ದಿನ 10 ಜಿಬಿ ಡಾಟಾದಂತೆ ತಿಂಗಳಿಗೆ 300 GB ಡಾಟಾ ಬಳಸಲು ಅವಕಾಶ ಕಲ್ಪಿಸಿದೆ.
ಅಲ್ಲದೇ ಈ ಆಫರ್ನ ಮತೊಂದು ಲಾಭವೆಂದರೆ, ಗ್ರಾಹಕರು ಪ್ರತಿ ದಿನ ರಾತ್ರಿ 9ರಿಂದ ಬೆಳಗ್ಗೆ 7 ಗಂಟೆ ವರೆಗೆ ಮತ್ತು ಭಾನುವಾರಗಳಂದು ಯಾವುದೇ ನೆಟ್ವರ್ಕ್ಗೆ ಶುಲ್ಕರಹಿತ ಅನಿಮಿತ ಉಚಿತ ಕರೆಗಳನ್ನು ಮಾಡಬಹುದು ಎಂದು ಕಂಪೆನಿ ತಿಳಿಸಿದೆ.
ಬಿಎಸ್ಎನ್ಎಲ್ ತನ್ನ ಬ್ರಾಡ್ಬ್ಯಾಂಡ್ ಸೇವೆಗಳಿಗೆ ಹೊಸ ಗ್ರಾಹಕರನ್ನು ಆಕರ್ಷಿಸಲು ಬಳಕೆದಾರರಿಗೆ ಈ ಕೊಡುಗೆಯನ್ನು ನೀಡಲು ನಿರ್ಧರಿಸಿದೆ.
ಬಿಎಸ್ಎನೆಲ್ ದೇಶಾದ್ಯಂತ ಅಗ್ಗದ ದರಗಳಲ್ಲಿ ಪ್ರತಿ ದಿನ 10 GB ವೈರ್ಲೈನ್ ಬ್ರಾಡ್ಬ್ಯಾಂಡ್ ಸೇವೆ ಒದಗಿಸುವ ಏಕೈಕ ಕಂಪೆನಿ ಎಂದು ಬಿಎಸ್ಎನ್ಎಲ್ ಮಂಡಳಿ ನಿರ್ದೇಶಕ ಎನ್.ಕೆ. ಗುಪ್ತಾ ತಿಳಿಸಿದ್ದಾರೆ.
ಗ್ರಾಹಕರು ಸಮೀಪದ ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಟೋಲ್ ಫ್ರೀ ಸಂಖ್ಯೆ 1800 345 1500ಗೆ ಕರೆ ಮಾಡಿ ಹೊಸ ಬ್ರಾಡ್ಬ್ಯಾಂಡ್ ಸೇವೆ ಪಡೆಯಬಹುದು ಎಂದು ಬಿಎಸ್ಎನ್ಎಲ್ ತಿಳಿಸಿದೆ.
ಬಿಎಸ್ಎನ್ಎಲ್ ಇತ್ತೀಚೆಗೆ ತನ್ನ ಮೊಬೈಲ್ ಗ್ರಾಹಕರಿಗೆ ರೂ.339ಕ್ಕೆ ಪ್ರತಿ ದಿನ 2 GB ಡಾಟಾ ಒದಗಿಸುವುದಾಗಿ ಘೋಷಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.