ನವದೆಹಲಿ: ದೇಶಕ್ಕೆ ಅವಮಾನ ಮಾಡುವ ಬಹುರಾಷ್ಟ್ರೀಯ ಸಂಸ್ಥೆಗಳನ್ನು ನರೇಂದ್ರ ಮೋದಿ ಸರ್ಕಾರ ಸಹಿಸೋದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಭಾರತದ ತ್ರಿವರ್ಣ ಧ್ವಜವನ್ನು ಹೋಲುವ ಮಾದರಿಯ ಡೋರ್ಮ್ಯಾಟ್ಗಳನ್ನು ಮಾರಟಕ್ಕಿಟ್ಟ ಆಮೇಜಾನ್.ಕಾಮ್ ವೆಬ್ಸೈಟ್ ವಿರುದ್ಧ ನರೇಂದ್ರ ಮೋದಿ ಸರ್ಕಾರ ಕಠಿಣ ನಿಲುವನ್ನು ತೆಗೆದುಕೊಂಡ ಹಿನ್ನಲೆಯಲ್ಲಿ ಅಮೆಜಾನ್ ಭಾರತದ ಕ್ಷಮೆಯಾಚನೆ ಮಾಡಿತ್ತು ಎಂಬುದೀಗ ಬಹಿರಂಗವಾಗಿದೆ.
ಅಮೆಜಾನ್ನ ಹಿರಿಯ ನಾಯಕತ್ವದೊಂದಿದೆ ವಿಷಯ ಪ್ರಸ್ತಾಪ ಮಾಡಿ, ಖಂಡನೆ ವ್ಯಕ್ತಪಡಿಸುವಂತೆ ಅಮೆರಿಕಾ ಮತ್ತು ಕೆನಡಾದ ಭಾರತೀಯ ರಾಯಭಾರಿಗಳಿಗೆ ಕೇಂದ್ರ ಸೂಚಿಸಿತ್ತು.
ಅಲ್ಲದೇ ತನ್ನ ಕೆನಡಾ ವೆಬ್ಸೈಟ್ನಿಂದ ಈ ಡೋರ್ಮ್ಯಾಟ್ಗಳನ್ನು ಅಳಿಸದೆ ಹೋದರೆ ಅಮೆಜಾನ್ ಉದ್ಯೋಗಿಗಳ ವೀಸಾವನ್ನು ವಜಾ ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎಚ್ಚರಿಕೆ ನೀಡಿದ್ದರು.
ವಿಷಯವನ್ನು ಅಮೆಜಾನ್ ಸಿಇಓ ಜೆಫ್ ಬೆಝೊಸ್ ಅವರೊಂದಿಗೂ ಭಾರತ ಪ್ರಸ್ತಾಪಿಸಿತ್ತು, ಅಲ್ಲದೇ ತನ್ನ ಇತರ ದೇಶಗಳ ವೆಬ್ಟೈಸ್ನಲ್ಲಿ ಇಂತಹ ಪ್ರೊಡಕ್ಟ್ಗಳನ್ನು ಹಾಕದಂತೆ ಸೂಚಿಸಿತ್ತು.
ಕೇಂದ್ರದ ಈ ಕಟುವಾದ ವಿರೋಧದಿಂದಾಗಿ ಅಮೆಜಾನ್ 24 ಗಂಟೆಯೊಳಗೆ ಡೋರ್ಮ್ಯಾಟ್ನ್ನು ತನ್ನ ವೆಬ್ಸೈಟ್ನಿಂದ ಅಳಿಸಿ ಹಾಕಿತ್ತು ಮತ್ತು ಕ್ಷಮೆಯಾಚನೆಯನ್ನೂ ಮಾಡಿತ್ತು.
ಅಲ್ಲದೇ ಭಾರತದ ಕಾನೂನು ಮತ್ತು ಸಂಪ್ರದಾಯವನ್ನು ಅಮೆಜಾನ್ ಗೌರವಿಸುತ್ತದೆ ಮತ್ತು ಅದಕ್ಕೆ ಬದ್ಧವಾಗಿರುತ್ತದೆ ಎಂದು ಅಮೆಜಾನ್ ಹೇಳಿಕೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.