ಮುಂಬಯಿ: ಮುಂಬಯಿ ಮಹಾನಗರದಲ್ಲಿ ಜನರ ಹೊಟ್ಟೆ ತುಂಬಿಸುತ್ತಿರುವ ಡಬ್ಬಾವಾಲಗಳಿಗೆ ಗೌರವವನ್ನು ಸಲ್ಲಿಸುವ ಸಲುವಾಗಿ ಕೈಯಲ್ಲಿ ಬುತ್ತಿ ಹಿಡಿದ ಡಬ್ಬಾವಾಲನ ಮಿನುಗುವ ಪ್ರತಿಮೆಯೊಂದನ್ನು ನಿರ್ಮಿಸಲಾಗಿದೆ.
ಖಾಸಗಿ ಸಂಸ್ಥೆಯೊಂದು ಮುಂಬಯಿ ಪುರಸಭೆಯ ಸಹಭಾಗಿತ್ವದಲ್ಲಿ ಹಾಜಿ ಅಲಿ ಸಮೀಪ ಈ ಪ್ರತಿಮೆಯನ್ನು ಸ್ಥಾಪಿಸಿದೆ. ಶುಕ್ರವಾರ ಇದರ ಉದ್ಘಾಟನಾ ಕಾರ್ಯವೂ ನಡೆಯಿತು. ವಲಯ್ ಶಿಂಧೆ ಎಂಬುವವರು ಈ ಪ್ರತಿಮೆಯನ್ನು ರಚಿಸಿದ್ದಾರೆ.
ಸ್ಟೈನ್ಲೆಸ್ ಸ್ಟೀಲ್ ಡಿಸ್ಕ್ಗಳಿಂದ ಶಿಂಧೆ ಅವರು 13 ಅಡಿ ಎತ್ತರದ ಡಬ್ಬಾವಾಲ ಪ್ರತಿಮೆಯನ್ನು ರಚಿಸಿದ್ದಾರೆ.
ಮನೆಯಿಂದ ಕಛೇರಿಗಳಿಗೆ ಲಂಚ್ ಬಾಕ್ಸ್ಗಳನ್ನು ಕೊಂಡೊಯ್ಯುವ ಡಬ್ಬಾವಾಲಗಳೆಂದರೆ ಮುಂಬಯಿ ಜನರಿಗೆ ಅಚ್ಚುಮೆಚ್ಚು. ಅವರ ಸೇವೆ, ಪ್ರಾಮಾಣಿಕತೆಗೆ ಕೃತಜ್ಞತೆಯನ್ನು ಅರ್ಪಿಸುವ ಸಲುವಾಗಿ ಈ ಪ್ರತಿಮೆಯನ್ನು ರಚಿಸಲಾಗಿದೆ.
ಡಬ್ಬಾವಾಲಗಳ ಸಮಯಪ್ರಜ್ಞೆ, ಕಾರ್ಯಕ್ಷಮತೆಯನ್ನು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಪ್ರೊಫೆಸರ್ಗಳು ಕೂಡ ‘ವಿಭಿನ್ನ ವ್ಯಾಪಾರಿ ಮಾದರಿ’ಯಾಗಿ ಅಧ್ಯಯನ ನಡೆಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.