ನವದೆಹಲಿ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯೊಳಗಿರುವ ಮದ್ಯದಂಗಡಿಗಳ ಬಂದ್ ಪ್ರಕ್ರಿಯೆ ಇಂದಿನಿಂದ ಆರಂಭ ಆಗಲಿವೆ.
2016ರ ಡಿಸೆಂಬರ್ನಲ್ಲಿ ನೀಡಿದ್ದ ತನ್ನ ಆದೇಶಕ್ಕೆ ಶುಕ್ರವಾರ ಕೆಲ ತಿದ್ದುಪಡಿಗಳನ್ನು ಸುಪ್ರೀಂಕೋರ್ಟ್ ತಂದಿದೆ. ಇದರ ಅನ್ವಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್, ಪಬ್ಗಳೂ ಬಂದ್ ಆಗಬೇಕಿದೆ.
ಅಲ್ಲದೇ ಸಿಕ್ಕಿಂ, ಮೇಘಾಲಯದಂತಹ ಸಣ್ಣ ರಾಜ್ಯಗಳಿಗೆ 500 ಮೀಟರ್ ಬದಲು 220 ಮೀಟರ್ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ.
ವರ್ಷಕ್ಕೆ 1.45 ಲಕ್ಷ ಜನ ಅಪಘಾತದಲ್ಲಿ ಬಲಿಯಾಗುತ್ತಾರೆ. ಇದರಲ್ಲಿ ಕುಡಿದು ವಾಹನ ಚಲಾಯಿಸುವುದರಿಂದ ಹೆಚ್ಚಿನ ಪ್ರಮಾಣದ ಅಪಘಾತಗಳು ಸಂಭವಿಸುತ್ತಿದೆ ಎಂಬ ಬಗ್ಗೆ ಬಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ಸುಪ್ರೀಂ ಈ ಆದೇಶ ಹೊರಡಿಸಿದೆ.
ಮಾ.31ರ ಬಳಿಕ ಹೆದ್ದಾರಿಯಲ್ಲಿನ ಮದ್ಯದಂಗಡಿಯ ಲೈಸೆನ್ಸ್ ನವೀಕರಿಸದಂತೆ ಮತ್ತು 2016ರ ಡಿ.15ರೊಳಗೆ ಲೈಸೆನ್ಸ್ ನೀಡಿರುವ ಮದ್ಯದಂಗಡಿಗಳ ಲೈಸೆನ್ಸ್ ಸೆಪ್ಟಂಬರ್ 30ರವರೆಗೆ ಚಾಲ್ತಿಯಲ್ಲಿರುವಂತೆ ಸುಪ್ರೀಂ ಆದೇಶಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.