ಚಂಡೀಗಢ: ತನ್ನ 50 ಸಾವಿರ ಬೆಲೆಯ ಸ್ಕೂಟರ್ಗೆ ವಿಐಪಿ ನಂಬರ್ ಹಾಕಿಸಲು ಚಂಡೀಗಢದ ಉದ್ಯಮಿಯೊಬ್ಬ ಬರೋಬ್ಬರಿ 8.1ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ.
ಕ್ಯಾಟರಿಂಗ್ ಉದ್ಯಮಿಯಾಗಿರುವ ಖನ್ವಲ್ಜೀತ್ ವಾಲಿಯಾ ಅವರು ಚಂಡೀಗಢ ಲೈಸೆನ್ಸ್ಯಿಂಗ್ ಅಥಾರಿಟಿ ಏರ್ಪಡಿಸಿದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಆಕ್ಟೀವ ಸ್ಕೂಟರ್ಗೆ 0001 ನಂಬರ್ ಪಡೆಯಲು ಬಿಡ್ ಮಾಡಿದ್ದಾರೆ. ಅಂತಿಮವಾಗಿ 8.1 ಲಕ್ಷ ತೆತ್ತು ನಂಬರನ್ನು ಪಡೆದುಕೊಂಡಿದ್ದಾರೆ.
ಈ ಹಿಂದೆ ಖನ್ವಲ್ಜೀತ್ ಅವರು ತಮ್ಮ ಮಗನ ಬೈಕಿಗೆ 0026 ನಂಬರ್ ಪಡೆಯಲು 2.6 ಲಕ್ಷ ಖರ್ಚು ಮಾಡಿದ್ದರು. ಇವರ ಕುಟುಂಬದ ಬಳಿ ಇರುವ ಇತರ ಎರಡು ವಾಹನಗಳಿಗೂ ಫ್ಯಾನ್ಸಿ ನಂಬರ್ಗಳಿವೆ. ಆದರೆ ಇಷ್ಟೊಂದು ಮೊತ್ತದ ಹಣ ಖರ್ಚು ಮಾಡಿ ನಂಬರ್ ಪಡೆದಿರುವುದು ಇದೇ ಮೊದಲು.
ತನ್ನ ತಂದೆಗೂ ಈ ಕ್ರೇಝ್ ಇತ್ತು, ಅದೂ ನನಗೂ ಬಂದಿದೆ ಎನ್ನುವ ಖನ್ವಲ್ಜೀತ್ ಅವರು ಚಂಡೀಗಢ ಟ್ಯಾಕ್ಸಿ ಯೂನಿಯನ್ನ ಸಂಸ್ಥಾಪಕ ಅಧ್ಯಕ್ಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.