ನವದೆಹಲಿ: ಪಾಕಿಸ್ಥಾನದಿಂದ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ದೊಡ್ಡ ಪ್ರಮಾಣದಲ್ಲಿ ಕದನ ವಿರಾಮ ಉಲ್ಲಂಘನೆ ಭಾರತರದ ಸುರಕ್ಷಿತ ಮತ್ತು ಶಾಂತಿಯುತ ಸಂಬಂಧಗಳ ದೃಷ್ಟಿಕೋನಕ್ಕೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನೆರೆರಾಷ್ಟ್ರದ ಜೊತೆಗಿನ ಬಾಂಧವ್ಯದಲ್ಲಿ ಭಾರತ ಹೆಚ್ಚಿನ ಸಂಪರ್ಕ, ಬಲಿಷ್ಠ ಸಹಕಾರ, ವಿಸ್ತೃತ ಸಂಬಂಧಗಳನ್ನು ಹೊಂದುವ ದೃಷ್ಟಿಕೋನ ಹೊಂದಿದೆ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜ್ಯ ಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಎಲ್ಲ ರಾಷ್ಟ್ರಗಳಿಗೆ ಭಾರತದ ಉನ್ನತ ಮಟ್ಟದ ಭೇಟಿ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಶಕ್ತಿ ನೀಡಿದೆ. ಸರ್ಕಾರ ಹಲವು ರಾಷ್ಟ್ರಗಳೊಂದಿಗೆ ದೀರ್ಘ ಕಾಲದ ಬಾಕಿ ಇರುವ ಸಮಸ್ಯೆಗಳು, ಸಕಾಲಿಕ ನೆರವು ವಿಸ್ತರಿಸಿದೆ. ಆದರೆ ಪಾಕ್ನ ಭಯೋತ್ಪಾದನೆ ಮತ್ತು ಕದನ ವಿರಾಮ ಉಲ್ಲಂಘನೆ ಶಾಂತಿಯುತ ಸಂಬಂಧದ ಭಾರತದ ದೃಷ್ಟಿಕೋನಕ್ಕೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರ ಈ ಸವಾಲುಗಳಿಗೆ ಹೊಸದಾಗಿ ಪರಿಹಾರ ಒದಗಿಸಲು ಮುಂದಾಗಿದೆ ಎಂದು ಸ್ವರಾಜ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.