ನವದೆಹಲಿ: ಸರ್ಕಾರಿ ಜಾಹೀರಾತುಗಳಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭಾವಚಿತ್ರ ಹಾಕಿ ಬಿಂಬಿಸಿದ ಎಎಪಿಯಿಂದ 97 ಕೋಟಿ ರೂಪಾಯಿಗಳನ್ನು ವಾಪಾಸ್ ಪಡೆಯುವಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಯ್ಜಲ್ ಆದೇಶಿಸಿದ್ದಾರೆ.
ಸರ್ಕಾರಿ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಫೋಟೋ ಹಾಕುವುದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಎಂದು ಅನಿಲ್ ಬಯ್ಜಲ್ ತಿಳಿಸಿದ್ದಾರೆ. ಸರ್ಕಾರದ ಬೊಕ್ಕಸದಿಂದ ಜಾಹೀರಾತಿಗೆ ಹಣ ವ್ಯಯಿಸಲಾಗಿದೆ. ಹೀಗಾಗೀ ಈ ಹಣವನ್ನು ವಾಪಾಸ್ ಮಾಡಬೇಕು ಎಂದಿದದಾರೆ. ಅಲ್ಲದೇ ಹಣವನ್ನು ನೀಡುವುದಕ್ಕೆ ಎಎಪಿಗೆ 30 ದಿನಗಳ ಸಮಯಾವಕಾಶ ನೀಡಿದ್ದಾರೆ.
ಲೆ.ಗವರ್ನರ್ ಆದೇಶದ ಬಗ್ಗೆ ಯಾವುದೇ ಮಾಹಿತಿ ನಮಗೆ ಸಿಕ್ಕಿಲ್ಲ, ಹೀಗಾಗಿ ಈ ಬಗ್ಗೆ ಪ್ರತಿಕ್ರಿಯೆ ನೀಡೊಲ್ಲ ಎಂದು ಎಎಪಿ ಹೇಳಿದೆ.
ಸುಪ್ರೀಂಕೋರ್ಟ್ ತನ್ನ ೨೦೧೫ರ ಆದೇಶದಲ್ಲಿ ಸರ್ಕಾರದ ಜಾಹೀರಾತುಗಳಲ್ಲಿ ಪ್ರಧಾನಿ, ರಾಷ್ಟ್ರಪತಿಗಳ ಭಾವಚಿತ್ರ ಹಾಕಲು ಮಾತ್ರ ಅನುಮತಿ ನೀಡಿತ್ತು, ಆದರೆ ಈ ಆದೇಶ ಪರಿಶೀಲಿಸುವಂತೆ ಕೋತಿ ಕೇಂದ್ರ, ಪಶ್ಚಿಮಬಂಗಾಳ, ತಮಿಳುನಾಡು ಮತ್ತು ಕರ್ನಾಟಕಗಳು ಕೋರ್ಟ್ ಮೊರೆ ಹೋಗಿದ್ದವು. ಹೀಗಾಗಿ ಮುಖ್ಯಮಂತ್ರಿಗಳ ಭಾವಚಿತ್ರ ಹಾಕಲು ಅನುಮತಿಯನ್ನು ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.