ನವದೆಹಲಿ: ಎಪ್ರಿಲ್ 1, 2017ರಿಂದ ಆಟೋಮೊಬೈಲ್ ಕಂಪೆನಿಗಳು ಕೇವಲ ಬಿಎಸ್-IV ಅನುವರ್ತಿತ ವಾಹನಗಳನ್ನು ಮಾರಾಟ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ನ್ಯಾ. ಮದನ್ ಬಿ. ಲೋಕೂರ್ ಮತ್ತು ದೀಪಕ್ ಗುಪ್ತಾ ಅವರ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಆಟೋ ಕಂಪೆನಿಗಳು ಸುಮಾರು 8.5 ಲಕ್ಷ ಬಿಎಸ್-III ವಾಹನಗಳ ತಯಾರಿಯಲ್ಲಿ ತೊಡಗಿದ್ದು, ಸುಪ್ರೀಂ ಕೋರ್ಟ್ನ ಈ ಆದೇಶದಿಂದ ಕಂಪೆನಿಗಳಿಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ. ಬಿಎಸ್-III ವಾಹನಗಳ ಅಂದಾಜು ಮೌಲ್ಯ ಸುಮಾರು 12 ಕೋಟಿ ರೂ. ಆಗಿದೆ.
ಬಿಎಸ್-IV ಹೊರಸೂಸುವಿಕೆ ನಿಯಮಗಳು ಎಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಬಿಎಸ್-III ವಾಹನಗಳ ಸ್ಟಾಕ್ ಬೊರಹಾಕಲು ಕಂಪೆನಿಗಳು 6-7 ತಿಂಗಳು ಸಮಯಾವಕಾಶ ನೀಡುವಂತೆ ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಭಾರತದ ಅಟೋಮೊಬೈಲ್ ತಯಾರಕ ಸೊಸೈಟಿ (ಎಸ್ಐಎಎಂ) ಜನವರಿ 2016ರಿಂದ ಪ್ರತಿ ತಿಂಗಳು ಮಾರಾಟ ಮಾಡುತ್ತಿರುವ ಬಿಎಸ್-III ವಾಹನಗಳ ದಾಖಲೆಗನ್ನು ನ್ಯಾಯಾಲಯಕ್ಕೆ ಒದಗಿಸಿದ್ದು, ಅದು 96 ಸಾವಿರ ವಾಣಿಜ್ಯ, 6 ಲಕ್ಷ ದ್ವಿಚಕ್ರ ಮತ್ತು 40 ಸಾವಿರ ತ್ರಿಚಕ್ರ ವಾಹನಗಳು ಸೇರಿ 8.24 ಲಕ್ಷ ವಾಹನಗಳ ಸ್ಟಾಕ್ ಹೊಂದಿವೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.