ನವದೆಹಲಿ: ಖ್ಯಾತ ಬ್ರೆಸ್ಟ್ ಕ್ಯಾನ್ಸರ್ ತಜ್ಞ ಹಾಗೂ ಉಷಾಲಕ್ಷ್ಮೀ ಬ್ರೆಸ್ಟ್ ಕ್ಯಾನ್ಸರ್ ಫೌಂಡೇಶನ್ನ ಸಂಸ್ಥಾಪಕ ಡಾ.ರಘುರಾಮ್ ಪಿಲ್ಲರಿಸೆಟ್ಟಿ ಅವರು ಭಾರತದ ಅತ್ಯುನ್ನತ ವೈದ್ಯಕೀಯ ಪ್ರಶಸ್ತಿ ಡಾ.ಬಿ.ಸಿ.ರಾವ್ ನ್ಯಾಷನಲ್ ಅವಾರ್ಡ್ಗೆ ಬಾಜನರಾಗಿದ್ದಾರೆ.
ಈ ಅತ್ಯನ್ನತ ಪ್ರಶಸ್ತಿ ಸ್ವೀಕರಿಸುತ್ತಿರುವ ಅತೀ ಕಿರಿಯ ಸರ್ಜನ್ ಎಂಬ ಖ್ಯಾತಿಗೂ ಇವರು ಪಾತ್ರರಾಗಿದ್ದಾರೆ. ಅಲ್ಲದೇ ಪದ್ಮಶ್ರೀ ಪಡೆದ ತೆಲಂಗಾಣ ಮತ್ತು ಆಂಧ್ರಪ್ರದೇಶದ ಅತೀ ಕಿರಿಯ ವ್ಯಕ್ತಿಯೂ ಇವರಾಗಿದ್ದಾರೆ.
ಅಲ್ಲದೇ ಎಡಿನ್ಬರ್ಗ್ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ನಿಂದ ಸಾಗರೋತ್ತರ ಬಂಗಾರದ ಪದಕ ಪಡೆದ ಅತೀ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಇವರಿಗಿದೆ.
ಇವರು ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಸಂಸ್ಥಾಪಕರೂ ಹೌದು. ಭಾರತದ ಬ್ರೆಸ್ಟ್ ಕ್ಯಾನ್ಸರ್ ಅಸೋಸಿಯೇಶನ್ ಆಫ್ ಸರ್ಜನ್ಸ್ನ ಅಧ್ಯಕ್ಷರೂ ಆಗಿದ್ದಾರೆ.
‘ಸಾಮಾಜಿಕ-ವೈದ್ಯಕೀಯ ಪರಿಹಾರ ಕ್ಷೇತ್ರ’ದಲ್ಲಿ ಅತ್ಯುನ್ನತ ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ೨೦೧೬ನೇ ಸಾನಿಲ ಬಿ.ಸಿ ರಾಐ ನ್ಯಾಷನಲ್ ಅವಾರ್ಡ್ನ್ನು ಇವರಿಗೆ ನೀಡಲಾಗಿದೆ.
ಅವರು ತಮ್ಮ ತಾಯಿಯ ಹೆಸರಿನಲ್ಲಿ ಆರಂಭಿಸಿರುವ ಉಷಾಲಕ್ಷ್ಮೀ ಬ್ರೆಸ್ಟ್ ಕ್ಯಾನ್ಸರ್ ಫೌಂಡೇಶನ್ ಬ್ರೆಸ್ಟ್ ಕ್ಯಾನ್ಸರ್ ಪೀಡಿತರಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು, ಸೇವೆಗಳನ್ನು ನಡೆಸುತ್ತಿದೆ.
ಈ ಪ್ರತಿಷ್ಟಿತ ಪ್ರಶಸ್ತಿಯನ್ನು ರಘುರಾಮ್ ಅವರು ತಮ್ಮ ಫೌಂಡೇಶನ್ ಹಾಗೂ ಬ್ರೆಸ್ಟ್ ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ಸಮರ್ಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.