ಶಹರಣ್ಪುರ: ನೊಂದ ಮುಸ್ಲಿಂ ಗರ್ಭಿಣಿ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ವಿವಾದಾತ್ಮಕ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಅಲ್ಲದೇ ನಂಬಿಕೆಯಿಟ್ಟು ನಿಮಗೆ ಮತ ಚಲಾಯಿಸಿದ್ದೇನೆ, ಆ ನಂಬಿಕೆಯನ್ನು ಉಳಿಸಿಕೊಳ್ಳಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೇ ತನ್ನ ಪತ್ರದ ಮತ್ತೊಂದು ಪ್ರತಿಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೂ ಕಳುಹಿಸಿಕೊಟ್ಟಿದ್ದಾಳೆ.
ಇಬ್ಬರು ಹೆಣ್ಣು ಮಕ್ಕಳ ತಾಯಿ ಆಗಿರುವ ಶಹರಣ್ಪುರ ಮೂಲದ ಶಫುಗ್ತ 3ನೇ ಬಾರಿಗೆ ಗರ್ಭಿಣಿಯಾಗಿದ್ದಾಳೆ. ಆದರೆ ಆಕೆಯ ಗಂಡನ ಮನೆಯವರು 3ನೇ ಮಗು ಕೂಡ ಹೆಣ್ಣಾಗಬಹುದು ಎಂಬ ಹೆದರಿಕೆಯಿಂದ ಗರ್ಭಪಾತ ಮಾಡಿಸುವಂತೆ ಪೀಡಿಸಿದ್ದಾರೆ, ಇದಕ್ಕೆ ಒಪ್ಪಿದಿದ್ದಾಗ ನಡೆದ ಮಾತಿನ ಚಕಮಕಿ ವೇಳೆ ಈಕೆಯ ಪತಿ 3 ಬಾರಿ ತಲಾಖ್ ಹೇಳಿ ಈಕೆಯನ್ನು ತೊರೆದಿದ್ದಾನೆ.
‘ಗರ್ಭಪಾತ ಮಾಡಿಸಲು ಒಪ್ಪದೇ ಇದ್ದ ಕಾರಣ ಅತ್ತೆ ಮಾವಂದಿರು ನನಗೆ ದೈಹಿಕ ಹಲ್ಲೆ ನಡೆಸಿದ್ದಾರೆ, ನನ್ನ ಗಂಡ ಮೂರು ಬಾರಿ ತಲಾಖ್ ಹೇಳಿಬಿಟ್ಟ ಬಳಿಕ ಮನೆಯಿಂದ ಹೊರದಬ್ಬಿದ’ ಎಂದ ಶಫುಗ್ತ ಹೇಳಿಕೊಂಡಿದ್ದಾಳೆ.
ಅಸಾಹಯಕಳಾದ ಶಫುಗ್ತ ದಿಕ್ಕು ತೋಚದೆ ಮೋದಿಯವರಿಗೆ ಪತ್ರ ಬರೆದಿದ್ದಾಳೆ. ಮಾತ್ರವಲ್ಲದೇ ಭರವಸೆಯಿಟ್ಟು ಮೋದಿಗೆ ಮತಚಲಾಯಿಸಿದ್ದಾಗಿ ಹೇಳಿಕೊಂಡಿದ್ದಾಳೆ.
ಈಕೆಯಂತೆ ನೊಂದ ಹಲವಾರು ಮುಸ್ಲಿಂ ಮಹಿಳೆಯರು ಸುಪ್ರಿಂಕೋರ್ಟ್ಗೆ ಸಾರ್ವಜನಿಕ ಅರ್ಜಿ ಸಲ್ಲಿಸಿ ತ್ರಿವಳಿ ತಲಾಖ್ ರದ್ಧತಿಗೆ ಮನವಿ ಮಾಡಿದ್ದಾರೆ. ಆದರೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾತ್ರ ಇದಕ್ಕೆ ವಿರೋಧಿಸಿದ್ದು, ತ್ರಿವಳಿ ತಲಾಖ್ ರದ್ದು ಮಾಡಿದರೆ ಮುಸ್ಲಿಮರ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಿದೆ.
ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರ ಪಾಕಿಸ್ಥಾನ, ಇಂಡೋನೇಷ್ಯಾಗಳಲ್ಲೂ ತ್ರಿವಳಿ ತಲಾಖ್ ತೆಗೆದು ಹಾಕಲಾಗಿದೆ, ಆದರೆ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅದು ಇನ್ನೂ ಜೀವಂತವಾಗಿರುವುದು ದುರಾದೃಷ್ಟಕರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.