ನವದೆಹಲಿ: ವಾರದಲ್ಲಿ ಒಂದು ಬಾರಿಯಾದರೂ ಪೆಟ್ರೋಲ್, ಡಿಸೇಲ್ ವಾಹನಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಜನರಿಗೆ ಕರೆ ನೀಡಿದ್ದರು. ಅವರ ಈ ಕರೆಯನ್ನು ಬಿಹಾರದ ಕೆಲ ಬಿಜೆಪಿ ಶಾಸಕರು ಅನುಷ್ಠಾನಕ್ಕೆ ತಂದಿದ್ದಾರೆ.
ಮಂಗಳವಾರ ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನಕ್ಕೆ 6 ಮಂದಿ ಶಾಸಕರು ಪರಿಸರ ಸ್ನೇಹಿ ಇ-ರಿಕ್ಷಾ ಮೂಲಕ ಆಗಮಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇ-ರಿಕ್ಷಾದಲ್ಲಿ ಆಗಮಿಸಿದ ಬಿಜೆಪಿ ಎಂಎಲ್ಸಿ ಸಂಜಯ್ ಮಯುಖ್, ಭಾನುವಾರ ಮನ್ ಕೀ ಬಾತ್ನಲ್ಲಿ ಮೋದಿ ನವ ಭಾರತದ ನಿರ್ಮಾಣಕ್ಕೆ ಕೊಟ್ಟ ಸಲಹೆಗಳನ್ನು ನಾವು ಪಾಲನೆ ಮಾಡಿದ್ದೇವೆ ಅಷ್ಟೇ ಎಂದಿದ್ದಾರೆ.
ಆರು ಮಂದಿ ಶಾಸಕರು ಬಿಜೆಪಿ ರಾಜ್ಯ ಕಛೇರಿಯಿಂದ 2 ಕಿಲೋಮೀಟರ್ ದೂರದಲ್ಲಿರುವ ವಿಧಾನಸಭೆಗೆ ಇ-ರಿಕ್ಷಾ ಮೂಲಕವೇ ಆಗಮಿಸಿದರು ಮತ್ತು ಅಧಿವೇಶನ ಮುಗಿಸಿ ಇ-ರಿಕ್ಷಾ ಮೂಲಕವೇ ವಾಪಸ್ಸಾದರು.
ಪ್ರಧಾನಿಯವರ ಸಲಹೆಯನ್ನು ಜನರು ಗಂಭೀರವಾಗಿ ಪರಿಗಣಿಸಲಿ ಎಂಬ ನಿಟ್ಟಿನಲ್ಲಿ ಸಾಂಕೇತಿಕವಾಗಿ ಇ-ರಿಕ್ಷಾಗಳ ಮೂಲಕ ಪ್ರಯಣಿಸಿದೆವು ಎಂದು ಮಯುಖ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.