ನವದೆಹಲಿ: ತ್ರಿವಳಿ ತಲಾಖ್ ಪದ್ಧತಿಯನ್ನು ಅಕ್ರಮ ಎನ್ನುವುದಾದರೆ, ಅದು ಅಲ್ಲಾನನ್ನು ಅವಮಾನಿಸಿದಂತೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.
ಸುಪ್ರೀಂ ಕೋರ್ಟ್ನಲ್ಲಿ ಈ ಕುರಿತು ವಾದ ಮಂಡಿಸಿದ ಮಂಡಳಿ, ತಲಾಖ್ ನಿಯಮ ಬದಲಾದರೆ ಪವಿತ್ರ ಖುರಾನ್ ಗ್ರಂಥವನ್ನು ಪುನರ್ ಬರೆದಂತೆ ಆಗುತ್ತದೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದೆ.
ಭಾರತದ ಸಂವಿಧಾನದ ಅನುಚ್ಛೇದ-25 ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಈ ನಿಟ್ಟಿನಲ್ಲಿ ವೈಯಕ್ತಿಕ ಕಾನೂನನ್ನು ಪಾಲಿಸುವ ಹಕ್ಕು ತಮಗಿದೆ ಎಂದು ಮಂಡಳಿ ಹೇಳಿದ್ದು, ತ್ರಿವಳಿ ತಲಾಖ್ ಕಾನೂನು ಬಾಹಿರ ಎಂದು ತೀರ್ಮಾನಿಸದ್ದೇ ಆದಲ್ಲಿ ಅಲ್ಲಾನ ಆಶಯಕ್ಕೆ ಧಕ್ಕೆ ಬರಲಿದೆ ಎಂದು ವಾದಿಸಿದೆ.
ಈ ಕುರಿತು ಮಂಡಳಿ ಲಿಖಿತವಾಗಿ ವಾದವನ್ನು ಸಲ್ಲಿಸಿದೆ. ಇನ್ನೆರಡು ದಿನಗಳಲ್ಲಿ ತ್ರಿವಳಿ ತಲಾಖ್ ಕುರಿತು ವಿಚಾರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಹೆಜ್ಜೆ ಇಟ್ಟಿದೆ. ಹಿರಿಯ ವಕೀಲ ಎಜಾಬ್ ಮಕ್ಬೂಲ್ ಲಿಖಿತ ವಾದವನ್ನು ಮಂಡಳಿ ಪರವಾಗಿ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.