ಶ್ರೀನಗರ: ಅಗ್ಗದ ದರಗಳಲ್ಲಿ ಔಷಧಿಗಳನ್ನು ಒದಗಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಜನ್ ಔಷಧಿ ಕೇಂದ್ರ ಶ್ರೀನಗರದ ರಾಜ್ಬಾಗ್ನಲ್ಲಿ ಆರಂಭಗೊಂಡಿದೆ.
ಈ ಯೋಜನೆಯಡಿಯಲ್ಲಿ ಈ ಪ್ರದೇಶದ ಬಡ ಜನರು ಅಗ್ಗದ ದರಗಳಲ್ಲಿ ಗುಣಮಟ್ಟದ ಔಷಧಿಗಳನ್ನು ಪಡೆಯಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2008ರಿಂದ ಈ ಯೋಜನೆ ಆರಂಭಗೊಂಡಿದ್ದು, ಇದೇ ಮೊದಲ ಬಾರಿ ಸಾರ್ವಜನಿಕರಿಗಾಗಿ ಗುಣಮಟ್ಟದ ಔಷಧಿಗಳ ಕೇಂದ್ರ ತೆರೆಯಲಾಗಿದೆ ಎಂದು ಜನ ಔಷಧಿ ಕಾಶ್ಮೀರ್ನ ರಾಜ್ಯ ಸಂಯೋಜಕ ರಿಫತ್ ನಜೀರ್ ಹೇಳಿದ್ದಾರೆ.
ಈ ಯೋಜನೆ ಜನಪ್ರಿಯತೆ ಪಡೆದಿದ್ದು, ಕಣಿವೆ ರಾಜ್ಯದ ನಿವಾಸಿಗಳು ಕೇಂದ್ರ ಸರ್ಕಾರದ ಈ ಯೋಜನೆಗಾಗಿ ಪ್ರಧಾನಿ ಮೋದಿ ಅರವನ್ನು ಪ್ರಶಂಸೆ ಮಾಡಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಇನ್ನಷ್ಟು ಮಳಿಗೆಗಳು ಪ್ರಾರಂಭಿಸುವ ಬಗ್ಗೆ ಬಯಕೆ ಹೊಂದಿದ್ದಾರೆ.
ದೇಶದಾದ್ಯಂತ ಜನರಿಗೆ ಔಷಧಿಗಳನ್ನು ಒದಗಿಸಲು ಈವರೆಗೆ 956 ಜನ್ ಔಷಧಿ ಕೇಂದ್ರಗಳನ್ನು ತೆರೆಯಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.