ನವದೆಹಲಿ: ಶಕ್ತಿಯ ಆರಾಧಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಚೈತ್ರ ನವರಾತ್ರಿ ಅಂಗವಾಗಿ ಇಂದಿನಿಂದ 9 ದಿನಗಳ ಕಾಲ ಉಪವಾಸ ನಡೆಸಲಿದ್ದಾರೆ.
ಮೋದಿ ಮತ್ತು ಯೋಗಿ ಇಬ್ಬರೂ ಶಕ್ತಿ ದೇವತೆ ದುರ್ಗೆಯ ಆರಾಧಕರಾಗಿದ್ದು, ಕಳೆದ ಹವಾರು ವರ್ಷಗಳಿಂದ ನವರಾತ್ರಿಯ ವೇಳೆ ಉಪವಾಸ ಮಾಡುತ್ತಾ ಬಂದಿದ್ದಾರೆ.
ಮುಂದಿನ 9 ದಿನಗಳವರೆಗೆ ಮೋದಿ ಕೇವಲ ನೀರು ಮತ್ತು ಲಿಂಬು ಶರಬತ್ತು ಸೇವಿಸಲಿದ್ದು, ಕಠಿಣ ಉಪವಾಸ ಮಾಡಲಿದ್ದಾರೆ. 35 ವರ್ಷಗಳಿಂದ ಮೋದಿ ಉಪವಾಸ ನಡೆಸುತ್ತಿದ್ದು, ಪ್ರಧಾನಿಯಾದ ಬಳಿಕ ತಮ್ಮ ಒತ್ತಡದ ಕಾರ್ಯದ ಮಧ್ಯೆಯೂ ಅವರು ಉಪವಾಸವನ್ನು ನಿಲ್ಲಿಸಿಲ್ಲ. 2014ರಲ್ಲಿ ಅಮೆರಿಕಾ ಪ್ರವಾಸದಲ್ಲಿದ್ದಾಗಲೂ ಅವರು ಉಪವಾಸ ಆಚರಿಸಿದ್ದರು.
ಗೋರಖನಾಥ ದೇಗುಲದ ಅರ್ಚಕರೂ ಆಗಿರುವ ಯೋಗಿ ದುರ್ಗೆಯ ಪರಮ ಭಕ್ತ. ಇವರು ಮೋದಿಯಷ್ಟು ಕಠಿಣವಾಗಿ ಉಪಾವಸ ಆಚರಿಸುವುದಿಲ್ಲ. ರಾತ್ರಿ ವೇಳೆ ಲಘು ಉಪಹಾರ ಸೇವಿಸುತ್ತಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.