ನವದೆಹಲಿ: ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮತ್ತು ಅವರ ಕುಟುಂಬದ ವಿರುದ್ಧದ ಕಪ್ಪುಹಣದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪತ್ರ ಮುಖೇನ ಒತ್ತಾಯಿಸಿದ್ದಾರೆ.
ಹೊಸದಾಗಿ ತರಲಾಗಿರುವ ಕಪ್ಪುಹಣ ಕಾಯ್ದೆ ಮತ್ತು ಬೆನಾಮಿ ಕಾಯ್ದೆಯ ಅನ್ವಯ ತನಿಖೆ ನಡೆಸುವಂತೆ ಬೇಡಿಕೆಯಿಟ್ಟಿದ್ದಾರೆ.
ಚೆನ್ನೈನ ಆದಾಯ ತೆರಿಗೆ ಇಲಾಖೆಯ ತನಿಖಾಧಿಕಾರಿಗಳ ತಂಡದ ವರದಿಯನ್ನು ಉಲ್ಲೇಖ ಮಾಡಿರುವ ಸ್ವಾಮಿ, ಚಿದಂಬರಂ ಮತ್ತು ಅವರ ಕುಟುಂಬ ಸದಸ್ಯರನ್ನು ಭ್ರಷ್ಟಾಚಾರ ತಡೆ ಕಾಯ್ದೆ, ಡಿಸ್ಪ್ರೊಪೊರ್ಶನೇಟ್ ಅಸೆಟ್ ಪ್ರಕರಣ ಮತ್ತು ಹಣಕಾಸು ವಂಚನೆ ತಡೆ ಕಾಯ್ದೆಯಡಿ ಮಾತ್ರವಲ್ಲದೇ ಕಪ್ಪು ಹಣ ಕಾಯ್ದೆ ಮತ್ತು ಬೆನಾಮಿ ಕಾಯ್ದೆಯಡಿಯಲ್ಲೂ ತನಿಖೆಗೊಳಪಡಿಸಬೇಕು ಎಂದಿದ್ದಾರೆ.
‘ಜಗತ್ತಿನ ಹಲವು ಕಡೆ ಚಿದಂಬರಂ ಮತ್ತು ಅವರ ಕುಟುಂಬ ಸದಸ್ಯರ ಅಕ್ರಮ ಆಸ್ತಿಗಳಿವೆ ಎಂದು ವರದಿ ತಿಳಿಸಿದೆ. ಚಿದಂಬರಂ ಹಣಕಾಸು ಮತ್ತು ಗೃಹಸಚಿವರಾಗಿದ್ದ ಸಂದರ್ಭ ತೆಗೆದುಕೊಂಡ ಲಂಚಗಳಿಂದಲೇ ಈ ಎಲ್ಲಾ ಅಕ್ರಮ ಆಸ್ತಿಗಳನ್ನು ಖರೀದಿ ಮಾಡಲಾಗಿದೆ ಎಂದು ವರದಿಯಿಂದ ತಿಳಿದು ಬರುತ್ತದೆ’ ಎಂದು ಸ್ವಾಮಿ ಆರೋಪಿಸಿದ್ದಾರೆ.
‘ಚಿದಂಬರಂ ಕುಟುಂಬಕ್ಕೆ ಲಂಡನ್, ಮಲೇಷ್ಯಾ, ಸಿಂಗಾಪುರ, ಶ್ರೀಲಂಕಾ, ಸ್ಪೇನ್, ಫ್ರಾನ್ಸ್, ಗ್ರೀಕ್ ಸೇರಿದಂತೆ ವಿವಿಧ ೧೪ ದೇಶಗಳಲ್ಲಿ ಇವರಿಗೆ ವೈನ್ ಯಾರ್ಡ್, ಹೋಟೆಲ್, ಫಾರ್ಮ್ಹೌಸ್ಗಳಿವೆ’ ಎಂದು ಅವರು ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.