ಮುಂಬಯಿ: ಭಾರತದ ವಿಭಜನೆಗೆ ಪ್ರಮುಖ ಕಾರಣೀಕರ್ತನಾದ, ಪಾಕಿಸ್ಥಾನದ ನಿರ್ಮಾತೃ ಮೊಹಮ್ಮದ್ ಆಲಿ ಜಿನ್ನಾನ ಮುಂಬಯಿಯಲ್ಲಿರುವ ನಿವಾಸವನ್ನು ಧ್ವಂಸಗೊಳಿಸಬೇಕು ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕರೊಬ್ಬರು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ಮಂಗಳ್ ಪ್ರಭಾತ್ ಲೋಧ, ದಕ್ಷಿಣ ಮುಂಬಯಿಯಲ್ಲಿರುವ ಜಿನ್ನಾ ನಿವಾಸದಿಂದಲೇ ಭಾರತ ವಿಭಜನೆಯ ಕುತಂತ್ರ ಆರಂಭವಾಯಿತು ಎಂದಿದ್ದಾರೆ.
‘ಜಿನ್ನಾ ನಿವಾಸ ವಿಭಜನೆಯ ಸಂಕೇತ, ಅದನ್ನು ಧ್ವಂಸಗೊಳಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಸುಮಾರು 2.5 ಎಕರೆ ಪ್ರದೇಶದಲ್ಲಿ ಜಿನ್ನಾ ನಿವಾಸವಿದ್ದು, ಇದರ ಒಟ್ಟು ಮೌಲ್ಯ 400 ಮಿಲಿಯನ್ ಅಮೆರಿಕನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಸಂಸತ್ತಿನಲ್ಲಿ ’ಎನಿಮಿ ಪ್ರಾಪರ್ಟಿ ಆಕ್ಟ್’ ಮಂಡಿಸಲಾಗಿದೆ, ಹೀಗಾಗಿ ಜಿನ್ನಾ ಆಸ್ತಿ ಭಾರತ ಸರ್ಕಾರದ್ದು, ಆತನ ಪೀಳಿಗೆಯವರು ಈ ಆಸ್ತಿಯ ಹಕ್ಕು ಪಡೆಯಲು ಸಾಧ್ಯವಿಲ್ಲ. ಈ ಆಸ್ತಿಯನ್ನು ಧ್ವಂಸಗೊಳಿಸುವುದೊಂದೆ ಇರುವ ಆಯ್ಕೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.