ಜಾರ್ಖಾಂಡ್: ಬಿಸಿಯೂಟ ಸೌಲಭ್ಯ ಪಡೆಯಲು ಆಧಾರ್ಕಾರ್ಡ್ನ್ನು ಇತ್ತೀಚಿಗೆ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿತ್ತು, ಇದರಿಂದ 3 ರಾಜ್ಯಗಳಲ್ಲಿ 4.4 ಲಕ್ಷ ‘ಸುಳ್ಳು ವಿದ್ಯಾರ್ಥಿ’ಗಳು ಬಿಸಿಯೂಟಕ್ಕೆ ನೋಂದಾಯಿತರಾಗಿರುವುದು ಬೆಳಕಿಗೆ ಬಂದಿದೆ.
ಜಾರ್ಖಾಂಡ್, ಮಣಿಪುರ, ಆಂಧ್ರಪ್ರದೇಶಗಳಲ್ಲಿ ಸರ್ಕಾರ ಬಿಸಿಯೂಟಕ್ಕೆ ನೀಡುವ ಅನುದಾನವನ್ನು ಲಪಟಾಯಿಸುವ ದೃಷ್ಟಿಯಿಂದ ಅಸ್ತಿತ್ವದಲ್ಲೇ ಇರದ ವಿದ್ಯಾರ್ಥಿಗಳ ಹೆಸರನ್ನು ನೋಂದಾಯಿಸಲಾಗಿತ್ತು. ಈ 3 ರಾಜ್ಯದಲ್ಲಿನ ಹಲವಾರು ಸರ್ಕಾರಿ ಶಾಲೆಗಳಲ್ಲಿ ಬರೋಬ್ಬರಿ 4.4 ಲಕ್ಷ ಅಸ್ತಿತ್ವದಲ್ಲೇ ಇರದ ವಿದ್ಯಾರ್ಥಿಗಳ ಹೆಸರನ್ನು ಬಿಸಿಯೂಟಕ್ಕೆ ನೊಂದಾಯಿಸಲಾಗಿತ್ತು ಎಂಬುದು ಆಧಾರ್ಕಾರ್ಡ್ನಿಂದಾಗಿ ಬಹಿರಂಗವಾಗಿದೆ.
ಆಂಧ್ರಪ್ರದೇಶದಲ್ಲಿ 29 ಲಕ್ಷ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಆಧಾರ್ಗೆ ಲಿಂಕ್ ಮಾಡಲಾಗಿದೆ. ಇಲ್ಲಿ 2.1 ಲಕ್ಷ ಅಸ್ತಿತ್ವದಲ್ಲೇ ಇರದ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದಾರೆ ಎಂಬ ದಾಖಲೆ ಸೃಷ್ಟಿಸಲಾಗಿದ್ದು, ಅದೀಗ ಬಯಲಿಗೆ ಬಂದಿದೆ. ಜಾರ್ಖಾಂಡ್ನಲ್ಲಿ 2.2 ಲಕ್ಷ ಮತ್ತು ಮಣಿಪುರ 1500 ಅಸ್ತಿತ್ವದಲ್ಲಿ ಇರದ ವಿದ್ಯಾರ್ಥಿಗಳ ನೋಂದಾಣಿಯಾಗಿತ್ತು.
ಉಳಿದ ರಾಜ್ಯಗಳಲ್ಲೂ ಇಂತಹ ಅಕ್ರಮ ಬಯಲಿಗೆಳೆಯುವ ಕಾರ್ಯಗಳು ಭರದಿಂದ ಸಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.