ನವದೆಹಲಿ: ಪದ್ಮ ಪ್ರಶಸ್ತಿಗೆ ಪ್ರಸ್ತಾಪಿಸಲಾಗಿದ್ದ ಗೃಹ ಸಚಿವಾಲಯದ 18,768 ನಾಮನಿರ್ದೇಶನ ಪಟ್ಟಿ ಪ್ರಕಾರ, ಕೇಂದ್ರ ಸರ್ಕಾರ ಪ್ರಮುಖ ರಾಜಕಾರಣಿಗಳು ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಪಟ್ಟಿಯಿಂದ ಹಲವರ ಹೆಸರನ್ನು ತಿರಸ್ಕರಿಸಿದೆ. ಇದರಲ್ಲಿ ಬಿಜೆಡಿ ಸಂಸದ ಬೈಜಯಂತ್ ಪಾಂಡಾ, ಆಧ್ಯಾತ್ಮಿಕ ಗುರು ಗುರ್ಮಿತ್ ರಾಮ್ ರಹೀಂ ಸಿಂಗ್, ಗಗನಸಖಿ (ದಿವಂಗತ) ನೀರ್ಜಾ ಭಾನೋ, ಕ್ರಿಕೆಟಿಗ ಎಮ್.ಎಸ್.ಧೋನಿ ಮತ್ತು ತಬಲಾ ಕಲಾವಿದ ಝಾಕಿರ್ ಹುಸೇನ್ ಹೆಸರನ್ನು ತಿರಸ್ಕರಿಸಿದೆ.
ಸಂಗೀತ ಸಂಯೋಜಕ ಅನು ಮಲಿಕ್, ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕ ಪಂ. ಅಜಯ್ ಫೋಹಂಕರ್ ಇವರ ಹೆಸರನ್ನೂ ತಿರಸ್ಕರಿಸಲಾಗಿದೆ. ಇವರ ಹೆಸರನ್ನು ಬಿಜೆಪಿ ಸಂಸದ ಹಾಗೂ ಎಚ್ಆರ್ಡಿ ಸಚಿವ ಪ್ರಕಾಶ್ ಜಾವಡೇಕರ್ ಶಿಫಾರಸ್ಸು ಮಾಡಿದ್ದರು. ಮುಂಬಯಿಯ ಬಿಜೆಪಿ ಸಂಸದೆ ಪೂನಂ ಮಹಾಜನ್ ಭಾರತೀಯ ಶಾಸ್ತ್ರೀಯ ಸಂಗೀತಗಾರ ಗುಲಾಂ ಮುಸ್ತಾಫಾ ವಾರಿಸ್ ಖಾನ್ ಹೆಸರನ್ನು ನಾಮನಿರ್ದೇಶಿಸಿದ್ದು, ಅವರ ಹೆಸರನ್ನು ತಿರಸ್ಕರಿಸಲಾಗಿದೆ.
ಗೃಹ ಸಚಿವಾಲಯ ತಿರಸ್ಕೃತ ಹೆಸರುಗಳಿಗೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಇನ್ನುಳಿದಂತೆ ಸುಪ್ರೀಂ ಕೋರ್ಟ್ ನ್ಯಾ. ಜಸ್ಟೀಸ್ ಅಮಿತವ್ ರಾಯ್, ಎನ್ಐಎ ಸಂಸ್ಥಾಪಕ ಅಧ್ಯಕ್ಷ ದಿವಂಗತ ರಾಧಾ ವಿನೋದ್ ರಾಜು, ಬಾಲಿವುಡ್ ನಟ ಮನೋಜ್ ಬಾಜ್ಪಯಿ, ಜರ್ನಲಿಸ್ಟ್ ಅರ್ಣಬ್ ಗೋಸ್ವಾಮಿ, ರಾಜ್ಯಸಭಾ ಸಂಸದೆ ಜಯಾ ಬಚ್ಚನ್, ಚಿತ್ರ ನಿರ್ಮಾಪಕ ವಿಧು ವಿನೋದ್ ಚೋಪ್ರಾ, ಶೂಟರ್ ಅಭಿನವ್ ಬಿಂದ್ರಾ, ಬಿಲ್ಲುಗಾರ ಡೋಲಾ ಬ್ಯಾನರ್ಜಿ ಮೊದಲಾದವರ ಹೆಸರು ತಿರಸ್ಕೃತಗೊಂಡಿದೆ.
ಅಧಿಕಾರಿಗಳು ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಪ್ರಶಸ್ತಿ ಸಂಶೋಧಕರ ಸಮಿತಿ ನಾಮನಿರ್ದೇಶನಕ್ಕೆ ಶಿಫಾರಸ್ಸು ಮಾಡಿದ್ದ 18 ಹೆಸರುಗಳಲ್ಲಿ ಸಂಗೀತಗಾರ ವಿಶ್ವ ಮೋಹನ್ ಭಟ್, ಕುಸ್ತಿ ಪಟು ಸಾಕ್ಷಿ ಮಲಿಕ್ ಹಾಗೂ ಜಿಮ್ನ್ಯಾಸ್ಟ್ ದೀಪಾ ಕರ್ಮಾಕರ್ ಅವರನ್ನು ಹೆಸರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.