ಕೊಲಂಬೋ: 2020ರ ವೇಳೆಗೆ 29 ಸರಾಸರಿ ವಯಸ್ಸಿನೊಂದಿಗೆ ಜಗತ್ತಿನ ಅತ್ಯಂತ ಯುವ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ಶ್ರೀಲಂಕಾದ ಭಾರತೀಯ ರಾಯಭಾರಿ ತರಣ್ಜೀತ್ ಸಿಂಗ್ ಸಂಧು ತಿಳಿಸಿದ್ದಾರೆ.
ಕೊಲಂಬೋದಲ್ಲಿ ವಿದೇಶಾಂಗ ನೀತಿ ಉಪನ್ಯಾಸ ನೀಡಿ ಮಾತನಾಡಿದ ಅವರು, 2020ರ ವೇಳೆಗೆ ಭಾರತದ ಶೇ.೬೪ರಷ್ಟು ಜನಸಂಖ್ಯೆ ಉದ್ಯೋಗ ಮಾಡುವ ವಯಸ್ಸಿಗೆ ಬರಲಿದೆ ಎಂದಿದ್ದಾರೆ.
ಪಶ್ಚಿಮ ಯುರೋಪ್, ಅಮೆರಿಕ, ಸೌತ್ ಕೊರಿಯಾ, ಜಪಾನ್ ಮತ್ತು ಚೀನಾ ದೇಶಗಳಿಗೆ ವಯಸ್ಸಾಗುತ್ತಿದೆ, ಹೀಗಾಗೀ ಭಾರತಕ್ಕೆ ಹೆಚ್ಚಿನ ಆದ್ಯತೆ ಸಿಗಲಿದ್ದು, ಇದು ಜಿಡಿಪಿ ದರದ ಪ್ರಗತಿಗೆ ಸಹಾಯಕವಾಗಲಿದೆ ಎಂದಿದ್ದಾರೆ.
‘ತನ್ನ 1.25 ಮಿಲಿಯನ್ ನಾಗರಿಕರ ಅಭಿವೃದ್ಧಿ ಆಕಾಂಕ್ಷೆಯನ್ನು ಪೂರೈಸುವುದೇ ಭಾರತದ ವಿದೇಶಾಂಗ ನೀತಿಯ ಮೊದಲ ಆಶಯ’ ಎಂದಿರುವ ಅವರು, ನಮ್ಮ ಅಭಿವೃದ್ಧಿಗಾಗಿಯೇ ನಮ್ಮ ರಾಜತಾಂತ್ರಿಕತೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.