ಲಕ್ನೋ: ತನ್ನ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಹತ್ತು ಹಲವು ಕ್ರಮಗಳನ್ನು ಕೈಗೊಂಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಇದೀಗ ಆಡಳಿತದಲ್ಲಿನ ಅಧಿಕಾರಿಗಳನ್ನು ಚುರುಕುಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ.
ದಿನಕ್ಕೆ 18 ರಿಂದ 20 ಗಂಟೆ ದುಡಿಯಬೇಕು, ಇಲ್ಲವಾದರೆ ಕೆಲಸ ಬಿಟ್ಟು ತೊಲಗಬೇಕು ಎಂಬ ಆಜ್ಞೆಯನ್ನು ಅವರು ಅಧಿಕಾರಿಗಳಿಗೆ ನೀಡಿದ್ದಾರೆ. ಅಲ್ಲದೇ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬವನ್ನು ಸರ್ಕಾರ ಸಹಿಸೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ನಾನು ಕಾರ್ಯಪ್ರಜ್ಞೆ ಇರುವವ, ಅಧಿಕಾರಿಗಳೂ ತ್ವರಿತ ಕಾರ್ಯ ಮಾಡಬೇಕು. ಯಾರಿಗೆ ಶ್ರಮವಹಿಸಿ ದುಡಿಯುವ ಮನಸ್ಸಿದೆ ಅವರು ಇರಬಹುದು, ಉಳಿದವರು ಹೋಗಬಹುದು’ ಎಂದಿದ್ದಾರೆ.
‘ವಿನಂಬ್ರತೆಯಿಂದ ಕಾರ್ಯ ಮಾಡಿ, ಅಧಿಕಾರವನ್ನು ತೋರಿಸಬೇಡಿ’ ಎಂದು ಅವರು ಕರೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.